ನ.1ರ ಕನ್ನಡಿಗರ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಬದಿಯಡ್ಕ: ಕರ್ನಾಟಕ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ನವಂಬರ್ 1ರಂದು ಕಾಸರಗೋಡು ಕನ್ನಡಿಗರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುವ ಪ್ರತಿಭಟನೆಗೆ  ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

ಹತ್ತು ಸಮಸ್ತರು ಪೆರಡಾಲ, ಯಕ್ಷ ವಿಹಾರಿ ಬದಿಯಡ್ಕ, ಯಕ್ಷಭಾರತಿ ನೀರ್ಚಾಲು ಎಂಬೀ ಸಂಘಟನೆಗಳು ಕನ್ನಡಿಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಕನ್ನಡಿಗರಿಗೆ ಸಿಗಬೇಕಾದ ನ್ಯಾಯ ಯುತ ಹಕ್ಕುಗಳೊಂದಿಗೆ ನಡೆಯುವ ಈ ಹೋರಾಟದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇ ಕೆಂದು ಸಂಘಟನೆಗಳು ಕರೆ ನೀಡಿವೆ.

You cannot copy contents of this page