ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟಪರಾರಿಯಾದ ಆರೋಪಿ ಬಂಧನ

ಬದಿಯಡ್ಕ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಪರಾರಿಯಾದ ಆರೋಪಿಯನ್ನು ಬಂಧಿಸಲಾಗಿದೆ.  ಬಾಪಾಲಿಪೊನ ನಿವಾಸಿ ಬಿ.ಎಂ. ಸಹದ್ ಯಾನೆ ಅದ್ದು ಎಂಬಾತನನ್ನು ನಿನ್ನೆ ರಾತ್ರಿ ಕಾಸರಗೋಡು ಅಣಂಗೂರಿನಿಂದ ಬದಿಯಡ್ಕ ಎಸ್‌ಐ ಅಖಿಲ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಮೊನ್ನೆ ರಾತ್ರಿ ಚೆರ್ಲಡ್ಕ ಬಸ್ ನಿಲ್ದಾಣ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಆಟೋ ರಿಕ್ಷಾದಲ್ಲಿ 1.312 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈವೇಳೆ ರಿಕ್ಷಾದಲ್ಲಿದ್ದ ಅಂಗಡಿಮೊಗರು ಪೆರ್ಲಾಡಂ ನಿವಾಸಿ ರಿಫಾಯಿ ಬಿ.ಎಂ. ಎಂಬಾತನನ್ನು ಬಂಧಿಸಲಾಗಿತ್ತು. ಈ ವೇಳೆ  ಸಹದ್ ಯಾನೆ ಅದ್ದು ಓಡಿ ಪರಾರಿಯಾಗಿದ್ದನು.  ಆತನಿಗಾಗಿ ಶೋಧ ನಡೆಸುತ್ತಿದ್ದಂತೆ  ಆರೋಪಿ ನಿನ್ನೆ ರಾತ್ರಿ ಕರಂದಕ್ಕಾಡ್ ನಲ್ಲಿರುವುದಾಗಿ ತಿಳಿದುಬಂದಿತ್ತು. ಇದರಂತೆ ಬದಿಯಡ್ಕ ಎಸ್‌ಐ ನೇತೃತ್ವದ ಪೊಲೀಸರು ತಕ್ಷಣ ಅಲ್ಲಿಗೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ವೇಳಎ ಸೆರೆಗೀಡಾಗಿದಾ ನೆಂದು  ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸೀನಿಯರ್ ಪೊಲೀಸ್ ಆಫೀಸರ್‌ಗಳಾದ ಗೋಕುಲ್, ಶಶಿ, ಸಿಪಿಒಗಳಾದ ಶ್ರೀನೇಶ್, ಅಭಿಲಾಷ್ ಎಂಬಿವರಿದ್ದರು.

You cannot copy contents of this page