ಮಂಗಲ್ಪಾಡಿ: ಅಂಗಳದಲ್ಲಿರಿ ಸಿದ ಬೈಕ್ ಉರಿದು ನಾಶಗೊಂ ಡಿದೆ. ಪುಳಿಕುತ್ತಿ ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಳಿಯ ನಿವಾಸಿ ಪ್ರವೀಣ್ ಶೆಟ್ಟಿ ಎಂಬವರ ಬೈಕ್ ಉರಿದು ನಾಶಗೊಂಡಿದೆ. ಭಾನುವಾರ ರಾತ್ರಿ 9.30ರ ವೇಳೆ ಮನೆಯ ಅಂಗಳದಲ್ಲಿ ಬೈಕ್‌ನ್ನು ನಿಲ್ಲಿಸಲಾಗಿತ್ತು. ಮಧ್ಯ ರಾತ್ರಿ ಸುಮಾರು 1 ಗಂಟೆ ವೇಳೆ ಎಚ್ಚರಗೊಂಡಾಗ ಕಿಟಿಕಿ ಮೂಲಕ ಅಂಗಳದಿAದ ಬೆಳಕು ಕಂಡು ಬಂದಿದೆ. ಕೂಡಲೇ ಪ್ರವೀಣï ಬಾಗಿಲು ತೆರೆದು ಅಂಗಳಕ್ಕೆ ಹೋ ದಾಗ ಬೈಕ್ ಉರಿಯುತ್ತಿರುವುದು ಕಂಡುಬAದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು ಶಂಕಿ ಸಲಾಗಿದೆ. ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರವೀಣ ಶೆಟ್ಟಿ ನೀಡಿದ ದೂರಿನಂತೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
