ಕುಂಬಳೆ: ಕುಂಬೋಲ್ ಸಯ್ಯದ್ ಕುಂಞಿಕೋಯ ತಂಙಳ್‌ರ ಸಹೋದರಿ ಪುತ್ರಿಯ ಪತಿ ಸಯ್ಯದ್ ಎಪಿಎಸ್ ಆಟಕೋಯ ತಂಙಳ್ (65) ನಿಧನಹೊಂದಿದರು. ಆದೂರು ಸಯ್ಯದ್ ಮುತ್ತುಕೋಯ ತಂಙಳ್‌ರಪುತ್ರನಾದ ಮೃತರು ಪತ್ನಿ ಖದೀಜಬೀವಿ, ಮಕ್ಕಳಾದ ರೈಹಾ ನತ್ ಬೀವಿ, ಬುಸ್ರಾ ಬೀವಿ,ಸಯ್ಯದ್ ಅಶ್ರಫ್ ತಂಙಳ್, ಸಾಜಿದ ಬೀವಿ, ಅಳಿಯಂದಿರಾದ ಸಯ್ಯದ್ ಜಲೀಲ್ ತಂಙಳ್ ಕಾರೆಕ್ಕಾಡ್, ಸಯ್ಯದ್ ಜಾಫರ್ ಶಿಹಾಬ್ ತಂಙಳ್ ಕಾಞಂಗಾಡ್, ರವುಲ್ಲಾಬೀವಿ ವಳಪಟ್ಟಣಂ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.
