ಬಂದ್ಯೋಡು: ಚಳ್ಳಂಗಯ ತಲೆಮೊಗರು ಬಾಣಿಯನ್‌ಮೂಲೆ ನಿವಾಸಿ ಟಿ.ಕೆ. ಅಬ್ದುಲ್ಲ ಹಾಜಿ (70) ನಿಧನ ಹೊಂದಿದರು. ಹಲವಾರು ವರ್ಷ ಕಾಲ ಕೊಲ್ಲಿಯಲ್ಲಿದ್ದರು. ಮೃತರು ಪತ್ನಿ ಆಸ್ಯಮ್ಮ, ಮಕ್ಕಳಾದ ಶಾಹುಲ್ ಹಮೀದ್ ಹಿಮಮಿ ಸಖಾಫಿ, ಆತಿಕ್ಕ, ಕಮರುನ್ನಿಸ, ಸುಮಾಯ್ಯ, ಅಳಿಯಂದಿ ರಾದ ಯೂಸಫ್ ಎ.ಕೆ., ಅಬ್ದುಲ್ ಸತ್ತಾರ್, ಸೊಸೆ ಮೈಮೂನ ಮೀಯ ಪದವು ಹಾಗೂ ಸಹೋದರ ಸಹೋದರಿ ಯರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.





