ಪಂಚಾಯತ್ ನೌಕರೆ, ಇಬ್ಬರು ಮಕ್ಕಳು ನಿಗೂಢ ಸಾವು: ಪೊಲೀಸ್ ತನಿಖೆ ತೀವ್ರ

ಕಾಸರಗೋಡು: ಪಂಚಾಯತ್ ನೌಕರೆಯಾದ ಯುವತಿ ಹಾಗೂ ಇಬ್ಬರು ಮಕ್ಕಳು ಮನೆಯೊಳಗೆ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಬ್ರಕಾನ ನಿವಾಸಿಯೂ ಕೆಎಸ್‌ಇಬಿ ನೀಲೇಶ್ವರ ಚೊಯ್ಯಂ ಗೋಡು ಸೆಕ್ಷನ್ ಕಚೇರಿಯ ಸಬ್ ಇಂಜಿನಿಯರ್ ಟಿ.ಎಸ್. ರಂಜಿತ್ ಎಂಬವರ ಪತ್ನಿ, ಪೆರಿಂಗೋ ಪಂಚಾಯತ್ ಕಚೇರಿಯ ನೌಕರೆಯಾದ ಕೆ. ಸಜನ (೩೨), ಗೌತಂ (೯), ತೇಜಸ್ (೬) ಎಂಬಿವರು ಈ ತಿಂಗಳ ೯ರಂದು ಮಧ್ಯಾಹ್ನ ೧೨.೩೦ರ ವೇಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. …