ತಳಂಗರೆ ಪುಂಜಕೋಡಿ ವಲಿಯವೀಡು ಶ್ರೀ ವಯನಾಟು ಕುಲವನ್ ತೆಯ್ಯಂಕೆಟ್ಟು ಮಹೋತ್ಸವ: ಆಚರಣಾ ಸಮಿತಿ ರೂಪೀಕರಣ

ಕಾಸರಗೋಡು: ಶತಮಾನಗಳ ಇತಿಹಾಸ ಪರಂಪರೆ, ವಿಶಿಷ್ಟ ಆಚಾರಾನುಷ್ಠಾನಗಳು ಹಾಗೂ ಸಾಂಸ್ಕೃತಿಕ ವೈಭವವನ್ನು ಕಾಪಾಡಿ ಕೊಂಡು ಬಂದಿರುವ ತಳಂಗರೆ ಪುಂಜಕೋಡಿ ವಲಿಯವೀಡು ತರವಾಡಿನಲ್ಲಿ ಮೊದಲ ಬಾರಿಗೆ ಜರುಗಲಿರುವ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕೆಟ್ಟು ಮಹೋತ್ಸವದ ಯಶಸ್ವಿಗಾಗಿ ಆಚರಣಾ ಸಮಿತಿಯನ್ನು ರಚಿಸಲಾಯಿತು. ಏಪ್ರಿಲ್ ೨೨ರಿಂದ ೨೫ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಮಹೋತ್ಸವ ಜರಗಲಿದೆ.
ಇದರ ಪೂರ್ವಭಾವಿಯಾಗಿ ತರವಾಡಿನಲ್ಲಿ ನಡೆದ ರಾಶಿಚಿಂತನೆ ಹಾಗೂ ಆಚರಣಾ ಸಮಿತಿ ರಚನಾ ಸಭೆ ಗಣ್ಯರ ಉಪಸ್ಥಿತಿಯಿಂದ ಗಮನ ಸೆಳೆಯಿತು. ಬೆಳಿಗ್ಗೆ ರಾಶಿಚಿಂತನೆಯೊAದಿಗೆ ಚಾಲನೆ ದೊರೆಯಿತು. ನಂತರ ಜರಗಿದ ಆಚರಣಾ ಸಮಿತಿ ರಚನಾ ಸಭೆಯನ್ನು ತಂತ್ರಿ ಬ್ರಹ್ಮಶ್ರೀ ವಿಷ್ಣು ಪ್ರಕಾಶ್ ಪಟ್ಟೇರಿ ಕಾವುಮಠ ಉದ್ಘಾಟಿಸಿದರು. ತರವಾಡು ಸಮಿತಿ ಸದಸ್ಯ ವೇಣುಗೋಪಾಲನ್ ಅದ್ರುಕುಳಿ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಲೋಕಸಭಾ ಸದಸ್ಯ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದ್ದರು. ತೆಯ್ಯಂಕೆಟ್ಟು ಮಹೋತ್ಸವಗಳು ಕೇವಲ ಧಾರ್ಮಿಕ ವಿಧಿ-ವಿಧಾನಗಳು ಅಥವಾ ಆಚಾರಾನುಷ್ಠಾನಗಳಿಗೆ ಮಾತ್ರ ಸೀಮಿತವಾಗಿಲ್ಲ, ಅವು ನಾಡಿನ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ವದ ಸಾಮೂಹಿಕ ವೇದಿಕೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ೪ವ್ರ‍್ಧಿ ಲ್ಣ್ಬ´ಟಪಿಒ¥್ಣ….
ಇಂತಹ ಆಚರಣೆಗಳು ಸಮಾಜದ ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸಿ ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯನ್ನು ಬಲಪಡಿಸುತ್ತವೆ. ತರವಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಮಹೋತ್ಸವವು ಎಲ್ಲಾ ವರ್ಗಗಳ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ನಾಡಿನ ಸಾರ್ವಜನಿಕ ಹಬ್ಬವಾಗಿ ಹೊರಹೊಮ್ಮಲಿ ಹಾಗೂ ಅದರ ಯಶಸ್ಸಿಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಅವರು ಶುಭ ಹಾರೈಸಿದರು. ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್, ನಗರಸಭಾ ಸದಸ್ಯೆ ನೈಮುನ್ನಿಸಾ, ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು, ಉತ್ತರ ಮಲಬಾರ್ ತೀಯ ಸಮುದಾಯ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಿ. ರಾಜನ್ ಪೆರಿಯ, ಪ್ರಧಾನ ಕಾರ್ಯದರ್ಶಿ ನಾರಾಯಣನ್ ಚೂರಿಕ್ಕೋಡು, ತೀಯ ಮಹಾಸಭಾ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನ, ಎಸ್.ಎನ್.ಡಿ.ಪಿ. ಯೋಗಂ ಕಾಸರಗೋಡು ಯೂನಿಯನ್ ಕಾರ್ಯದರ್ಶಿ ಗಣೇಶ್ ಪಾರಕಟ್ಟೆ, ತಳಂಗರೆ ಮಾಲಿಕ್ ದೀನಾರ್ ವಲಿಯ ಜಮಾಅತ್ ಮಸೀದಿ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.
ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ನಗರಸಭಾ ಸದಸ್ಯರುಗಳು, ವಿವಿಧ ಕಳಗÀ ಕ್ಷೇತ್ರಗಳ ಪದಾಧಿಕಾರಿಗಳು, ಆಚಾರ ಸ್ಥಾನಿಕರು, ತರವಾಡು ಸದಸ್ಯರು, ಕುಟುಂಬ ಸದಸ್ಯರು ಹಾಗೂ ನಾಡಿನ ಜನರು ಸೇರಿದಂತೆ ಸಮಾಜದ ವಿವಿಧ ಸ್ತರಗಳ ಜನರು ಪಾಲ್ಗೊಂಡಿದ್ದರು.
ಆಚರಣಾ ಸಮಿತಿಯ ಪದಾಧಿಕಾರಿಗಳಾಗಿ ಎನ್. ಸತೀಶನ್ ಮನ್ನಿಪ್ಪಾಡಿ (ಅಧ್ಯಕ್ಷ), ಗಣೇಶ್ ಆನೆಬಾಗಿಲು (ಪ್ರಧಾನ ಸಂಚಾಲಕ), ಉದಯನ್ ಕೊಲ್ಲಂಪಾಡಿ ಹಾಗೂ ವೇಣುಗೋಪಾಲ್ ಅದ್ರುಕುಳಿ (ಕಾರ್ಯಾಧ್ಯಕ್ಷರು), ಸಂತೋಷ್ ಪಾಡಿ (ಖಜಾಂಚಿ) ಆಯ್ಕೆ¾್ಣ್ಫ್ತ¥್ಣÁ್ಣ್ನ. ಮಹೋತ್ಸವದ ಸುಗಮ ಹಾಗೂ ಯಶಸ್ವಿ ಆಯೋಜನೆಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಿ ಕಾರ್ಯಗಳನ್ನು ಸಮನ್ವಯಗೊಳಿಸಲು ನಿರ್ಧರಿಸಲಾಯಿತು. ಆಚರಣೆಗೆ ಸಂಬAಧಿಸಿದ ಸಿದ್ಧತೆಗಳು, ಮೂಲಸೌಕರ್ಯ ಅಭಿವೃದ್ಧಿ, ಪ್ರಚಾರ ಕಾರ್ಯಗಳು, ಆರ್ಥಿಕ ಸಂಗ್ರಹಣೆ, ಭಕ್ತರ ಪಾಲ್ಗೊಳ್ಳುವಿಕೆ ಮುಂತಾದ ಕ್ಷೇತ್ರಗಳಲ್ಲಿ ಸಮಯಬದ್ಧವಾಗಿ ಕಾರ್ಯಗಳು ಆರಂಭಗೊಳ್ಳಲಿವೆ.
ತರವಾಡಿನ ಶತಮಾನಗಳಷ್ಟು ಹಳೆಯ ಇತಿಹಾಸ ಪರಂಪರೆ ಹಾಗೂ ಅನುಷ್ಠಾನ ಪದ್ಧತಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದರ ಜೊತೆಗೆ, ಉತ್ತರ ಮಲಬಾರಿನ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಇನ್ನಷ್ಟು ಜನರಿಗೆ ತಲುಪಿಸುವುದು ಮಹೋತ್ಸವದ ಪ್ರಮುಖ ಉದ್ದೇಶವಾಗಿದೆ. ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಶ್ರೀ ವಯನಾಟ್ಟುಕುಲವನ್ ತೆಯ್ಯಂಕೆಟ್ಟು ಮಹೋತ್ಸವವನ್ನು ಮಹಾಸಂಗಮವನ್ನಾಗಿ ರೂಪಿಸಲು ಸಂಘಟಕ ಸಮಿತಿಯು ಯೋಜನೆ ರೂಪಿಸುತ್ತಿದೆ.
ಮಹೋತ್ಸವದ ಯಶಸ್ಸಿಗಾಗಿ ತರವಾಡು ಸದಸ್ಯರು, ಕಳಗ ಕ್ಷೇತ್ರಗಳು, ವಿವಿಧ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು, ಭಕ್ತಾದಿಗಳು ಹಾಗೂ ನಾಡಿನ ಜನರ ಪೂರ್ಣ ಸಹಕಾರ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪದಾಧಿಕಾರಿಗಳು ಕೋರಿದ್ದಾರೆ.

You cannot copy contents of this page