ತಲಪಾಡಿ ಅಪಘಾತ: ಶಾಸಕ ಎಕೆಎಂ ಅಶ್ರಫ್ ಸಂತಾಪ

ತಲಪಾಡಿ: ತಲಪಾಡಿಯಲ್ಲಿ ಸಂಭವಿಸಿದ ವಾಹನ ಅಪಘಾತ ಅತ್ಯಂತ ದುಃಖಕರವಾಗಿದೆ ಎಂದು ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದಾಗಿ ಶಾಸಕ ಎಕೆಎಂ ಅಶ್ರಫ್ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಪೂರ್ತಿಯಾಗುವುದರೊಂದಿಗೆ ದುರಂತಗಳು ಹೆಚ್ಚುತ್ತಿದೆ. ಅಪರಿಮಿತ ವೇಗ ಹಾಗೂ ಭಾರೀ ಮಳೆ ಅಪಘಾ ತಗಳಿಗೆ ಕಾರಣವಾಗುತ್ತಿದ್ದು, ಸರ್ವೀಸ್ ರಸ್ತೆಯನ್ನು ಮಾತ್ರ ಉಪಯೋಗಿ ಸಬೇಕಾದ ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಲವೊಮ್ಮೆ ಪ್ರಧಾನ ರಸ್ತೆಯ ಮೂಲಕ ಸಂಚರಿಸುತ್ತಿರುವುದು, ಸರ್ವೀಸ್ ರಸ್ತೆ, ಪ್ರಧಾನರಸ್ತೆಗಳಲ್ಲಿ ಸ್ಪರ್ಧಾತ್ಮಕ ಓಟದ ಮಧ್ಯೆ ಕೆಲವು ಚಾಲಕರು ಹೆಡ್‌ಸೆಟ್ ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಈ ರೀತಿಯ ಕಾನೂನು ವಿರುದ್ಧ ಚಟುವಟಿಕೆಗಳನ್ನು ಎದುರಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಅಪಘಾತಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆಗಾಗಿ ಕರ್ನಾಟಕ ಮುಖ್ಯಮಂತ್ರಿ, ಸ್ಪೀಕರ್ ಯು.ಟಿ. ಖಾದರ್‌ರಲ್ಲಿ ಆಗ್ರಹಿಸುವುದಾಗಿ ಶಾಸಕರು ತಿಳಿಸಿದರು.

You cannot copy contents of this page