ಅಸೌಕರ್ಯಗಳಿಂದ ಕಂಗೆಟ್ಟಿರುವ ತಾಲೂಕು ಕಚೇರಿ: ಮಂಜೇಶ್ವರ ತಾಲೂಕು ಕಚೇರಿಯನ್ನು ಉಪಯುಕ್ತ ಕಟ್ಟಡಕ್ಕೆ ಸ್ಥಳಾಂತರಿಸಲು ಒಬಿಸಿ ಮೋರ್ಚಾ ಮಂಡಲ ಸಮಿತಿ ಆಗ್ರಹ

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿ ಕಟ್ಟಡವನ್ನು ಜನರಿಗೆ ಉಪಯು ಕ್ತವಾದ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿ ಆಗ್ರಹಿಸಿದೆ. ಪ್ರಸ್ತುತ ಮಂಜೇಶ್ವರ ತಾಲೂಕು ಕಚೇರಿ ಎರಡನೇ ಮಹಡಿಯಲ್ಲಿರುವುದರಿಂದಾಗಿ ವೃದ್ದರು ಮೆಟ್ಟಿಲು ಹತ್ತಿ ತಲುಪುವುದು ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಈ ಕಚೇರಿ ಉಪ್ಪಳದ ಬಾಡಿಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯಾಚರಿ ಸುತ್ತಿದ್ದು, ಇಲ್ಲಿ ಮೂಲಭೂತ ಸೌಕರ್ಯವೂ ಲಭ್ಯವಿಲ್ಲ.

ವೆಳ್ಳರಿಕುಂಡ್, ಮಂಜೇಶ್ವರ ತಾಲೂಕುಗಳನ್ನು ಹಲವು ವರ್ಷಗಳ ಹಿಂದೆ ಒಂದೇ ಬಾರಿ ಸರಕಾರ ಘೋಷಿಸಿದ್ದು, ಆದರೆ ಮಂಜೇಶ್ವರ ತಾಲೂಕು ಕಚೇರಿ ಈಗಲೂ ಶೋಚನೀಯ ಸ್ಥಿತಿಯಲ್ಲಿದೆ. ಈ ಬಗ್ಗೆ ಇಲ್ಲಿನ ಶಾಸಕ ಮೌನವಾಗಿದ್ದಾರೆ ಎಂದು ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿ ಆರೋಪಿಸಿದೆ. ಕಚೇರಿಯನ್ನು ಉಪಯುಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಲು ಆಗ್ರಹಿಸಿ ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ಈ ತಿಂಗಳ ೧೬ರಂದು ಕುಂಬಳೆ ಯಲ್ಲಿ ಕುಂಬಳೆ ಮಂಡಲ ಸಾಮಾಜಿಕ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಉದ್ಘಾಟಿಸಿದರು. ಕುಂಬಳೆ ಮಡಲ ಸಮಿತಿ ಅಧ್ಯಕ್ಷ ಮಹೇಶ್ ಪುಣಿಯೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್ ಕುಂಬಳೆ, ಜಿಲ್ಲಾ ಕಾರ್ಯದರ್ಶಿ ಶ್ರೀಧರ ಬಾಯಾರ್ ಮಾತನಾಡಿದರು. ದಿನೇಶ್ ವಿ. ಮುಳಿಂಜ, ದಿನೇಶ್ ಚೆರುಗೋಳಿ, ಅಜಯ್ ಎಂ, ಜಯಪ್ರಕಾಶ್ ಎ, ಕೃಷ್ಣ ಕೆ. ಉಪಸ್ಥಿತರಿದ್ದರು. ಸುರೇಂದ್ರ ಶೇಣಿ ಸ್ವಾಗತಿಸಿ, ಅಭಿಲಾಷ್ ಪೇರಾಲ್ ವಂದಿಸಿದರು.

You cannot copy contents of this page