ಮಂಜೇಶ್ವರ: ಜ್ವರ ಬಾಧಿಸಿ ಟ್ಯಾಕ್ಸಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ನಿವಾಸಿ ದಿ| ಫಕ್ರುದ್ದೀನ್‌ರ ಪುತ್ರ ಅಬ್ದುಲ್ ಜಬ್ಬಾರ್ (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಗಲ್ಫ್ ಉದ್ಯೋಗಿಯಾಗಿದ್ದ ಇವರು ಊರಿಗೆ ಬಂದ ಬಳಿಕ ಉದ್ಯಾವರ ದಲ್ಲಿ ಟ್ಯಾಕ್ಸಿ ಚಾಲಕನಾಗಿದ್ದರು. ನಾಲ್ಕು ದಿನಗಳ ಹಿಂದೆ ಇವರಿಗೆ ಜ್ವರ ಬಾಧಿಸಿತ್ತು. ಕ್ಲಿನಿಕ್‌ವೊಂದ ರಿಂದ ಚಿಕಿತ್ಸೆ ಪಡೆದಿದ್ದರೂ ಜ್ವರ ಕಡಿಮೆಯಾಗಿರಲಿಲ್ಲ. ಈ ಮಧ್ಯೆ ಜ್ವರ ಉಲ್ಬಣಗೊಂಡು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಇದರಿಂದ ಕೂಡಲೇ ಇವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಾಯಿ ರುಖಿಯ, ಪತ್ನಿ ನಸೀಮ, ಮಕ್ಕಳಾದ ಇಬ, ಫಹಾದ್, ಫಾಯಿಸ್, ಇಲ್ಯಾಸ್, ಇರ್ಫಾನ್, ಸಹೋದರ ಸಹೋ ದರಿಯರಾದ ಅಬ್ದುಲ್ ರಸಾಕ್ (ದುಬಾಯಿ), ಸಫಿಯ, ನಫೀಸ, ಸೈನಬ, ನಸೀಮ, ಮುಮ್ತಾಜ್, ರುಖಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







