ಮಂಜೇಶ್ವರ: ಕಳೆದ 17 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಆನೆಕಲ್ಲು ನಿವಾಸಿ ಗೋಪಾಲ ನಾಯ್ಕ (47) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ವರ್ಕಾಡಿ ಧರ್ಮನಗರ ಮಣವಾಟಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಾಪಕರಾಗಿದ್ದರು. ಇವರ ತಂದೆ ಪೊಡಿಯ ನಾಯ್ಕ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಂದರಿ, ಪತ್ನಿ ಮಮತ, ಮಕ್ಕಳಾದ ರಕ್ಷಿತ್, ಯಕ್ಷಿತ್, ಸಹೋದರರಾದ ನಾರಾಯಣ ನಾಯ್ಕ್, ಕೃಷ್ಣ (ಅಧ್ಯಾಪಕ), ಸಹೋದರಿಯರಾದ ಕಮಲ, ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







