ಸಂಚರಿಸುತ್ತಿದ್ದ ಟೆಂಪೋ ಬೆಂಕಿಗಾಹುತಿ : ಅನಾಹುತದಿಂದ ಪಾರಾದ ಚಾಲಕ

ಕಾಸರಗೋಡು: ಸಂಚರಿಸುತ್ತಿದ್ದ ಟೆಂಪೋಗೆ ಬೆಂಕಿ ತಗಲಿ ಚಾಲಕ ಕೆಳಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾದ ಘಟನೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ. ಈ ಟೆಂಪೋ ಮೀನು ಹೇರಿಕೊಂಡು ಪಳ್ಳಿಕ್ಕೆರೆಯಿಂದ  ಉಳ್ಳಾಲಕ್ಕೆ ಹೋಗುತ್ತಿತ್ತು. ದಾರಿ ಮಧ್ಯೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಗೆ ತಲುಪಿದಾಗ ಇದ್ದಕ್ಕಿದ್ದಂತೆ ಅದರಲ್ಲಿ ಬೆಂಕಿ ಎದ್ದಿತು. ತಕ್ಷಣ ಚಾಲಕ ಟೆಂಪೋ ನಿಲ್ಲಿಸಿ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾದರು. ಊರವರು ಸೇರಿ ಬೆಂಕಿ ನಂದಿಸಲೆತ್ನಿಸಿ ದರೂ ಅದು ಸಫಲವಾಗಿಲ್ಲ. ಬಳಿಕ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಮೀನು ಮಾತ್ರವಲ್ಲದೆ ಅದು ಹೇರಿದ ಪ್ಲಾಸ್ಟಿಕ್ ಪೆಟ್ಟಿಗೆಗಳು ಸಹಿತ ಟೆಂಪೋ ಬೆಂಕಿಗಾಹುತಿಯಾಗಿ ಭಾರೀ ನಷ್ಟ ಉಂಟಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರಬಹುದೆಂದು ಶಂಕಿಸಲಾಗುತ್ತಿದೆ. ಟೆಂಪೋಗೆ ಬೆಂಕಿ  ತಗಲಿದಾಗ ಅದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೂ ಅಡಚಣೆ ಸೃಷ್ಟಿಸಿತು. ಪೊಲೀಸರು ಆಗಮಿಸಿ ಸಾರಿಗೆ ನಿಯಂತ್ರಣ ಏರ್ಪಡಿಸಿದರು.

You cannot copy contents of this page