ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್‌ಗೆ ಟೆಂಪೊ ಢಿಕ್ಕಿ ಹೊಡೆದಿದ್ದು, ಇದರಿಂದ ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಎದುರಾಯಿತು. ಇಂದು ಬೆಳಿಗ್ಗೆ ೮ಗಂಟೆ ವೇಳೆ ಘಟನೆ ನಡೆದಿದೆ. ರೈಲುಗಾಡಿಯೊಂದು ಆಗಮಿಸಲಿದ್ದ ಹಿನ್ನೆಲೆಯಲ್ಲಿ ಗೇಟ್ ಹಾಕುತ್ತಿದ್ದಂತೆ ಬಂಗ್ರಮಂಜೇಶ್ವರದಿಂದ ಹೊಸಂಗಡಿಯತ್ತ ಸಾಗುತ್ತಿದ್ದ ಟೆಂಪೋ ಗೇಟ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಗೇಟ್ ಮುರಿದು ಬಿದ್ದಿದ್ದು, ಕೂಡಲೇ ತಲುಪಿದ ಸಿಬ್ಬಂದಿಗಳು ಅದನ್ನು ತೆರವುಗೊಳಿಸಿದ್ದಾರೆ. ಇದರಿಂದ ಒಂದೂವರೆ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿ ಬಂತು.







