ಸಿಆರ್‌ಪಿಎಫ್ ಯೋಧರಿಗೆ ಗುಂಡಿಕ್ಕಿದ ಬೆನ್ನಲ್ಲೇ ಕಾಶ್ಮೀರದಲ್ಲ್ಲಿ ಉಗ್ರರ ಅಟ್ಟಹಾಸ: ವಿಶೇಷ ಕಾರ್ಯಾಚರಣೆಯ ಅಧಿಕಾರಿಗಳನ್ನು ಅಪಹರಿಸಿ ಕೊಲೆ

ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರು ನಿನ್ನೆ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ   ಮೂವರು ಸಿಆರ್‌ಪಿಎಫ್ ಯೋಧರು ಗಂಭೀರ ಗಾಯಗೊಂಡ ಘಟನೆ ನಡೆದ ಬೆನ್ನಲೇ  ವಿಶೇಷ ಪೊಲೀಸ್ ಪಡೆಯ ಇಬ್ಬರು  ಅಧಿಕಾರಿಗಳನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಕಿಶ್ತ್ವಾರ್ ಜಿಲ್ಲೆಯ ವಿಶೇಷ ಕಾರ್ಯಾಚರಣಾ ಪಡೆಯ ಪೊಲೀಸ್ ಅಧಿಕಾರಿಗಳಾದ ಬಾಬಿಚಂದ್ (57) ಮತ್ತು ರಶ್‌ಪಾಲ್ ಕುಮಾರ್ (45) ಉಗ್ರರ  ಗುಂಡಿಗೆ ಬಲಿಯಾದ ವೀರ ಯೋಧರಾಗಿದ್ದಾರೆ. ಇವರು ಕಿಯಾರ್ ಶಿಬಿರದಿಂದ ಧರ್ನಾಮರ್ವಾ ಪ್ರದೇಶದಲ್ಲಿರುವ ಶಿಬಿರಕ್ಕೆ  ತೆರಳುವ ಮಾರ್ಗದ ಮಧ್ಯೆ ದಿಢೀರ್ ನಾಪತ್ತೆಯಾಗಿದ್ದರು. ಇವರಿಗಾಗಿ ವಿಶೇಷ ಭದ್ರತಾ ಪಡೆ ಮತ್ತು ಪೊಲೀಸರು ಗಂಟೆಗಳ ಕಾಲ ಹುಡುಕಾಟ  ನಡೆಸಿದಾಗ ಧೇರ್ನಾ ಟಾಪ್ ಪ್ರದೇಶದಲ್ಲಿ ಅವರಿಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ಇಬ್ಬರ ಮೃತದೇಹಗಳ ಮೇಲೆ  ಗುಂಡಿನ ಗಾಯಗಳು ಕಂಡುಬಂದಿದೆ.  ಅವರ ಬಳಿ ಇದ್ದ  ರೈಫಲ್‌ಗಳು ನಾಪತ್ತೆಯಾ ಗಿದ್ದು, ಇದು ಆತಂಕಕ್ಕೆ  ಕಾರಣವಾಗಿದೆ.

ಉಗ್ರರು ಈ ಇಬ್ಬರು ಅಧಿಕಾರಿಗಳನ್ನು ಅಪಹರಿಸಿ  ಗುಂಡಿಕ್ಕಿ ಹತ್ಯೆಗೈದು   ಶಸ್ತ್ರಾಸ್ತ್ರಗಳನ್ನು ಅಪಹರಿಸಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ಸಂಶಯಿಸಲಾಗಿದೆ. ಉಗ್ರರ ಪತ್ತೆಗಾಗಿ ಗಡಿಭದ್ರತಾ ಪಡೆ ಮತ್ತು ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸದಲ್ಲಿ ತೊಡಗಿರುವುದು ಈ ಕಣಿವೆ ರಾಜ್ಯದಲ್ಲಿ ಮತ್ತೆ ಆತಂಕದ ವಾತಾವರಣ ತಲೆಯೆತ್ತುವಂತೆ ಮಾಡಿದೆ.

RELATED NEWS

You cannot copy contents of this page