ಕಾಸರಗೋಡು: ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ವಂದೇ ಮಾತರಂ ೧೫೦ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಚಾರ ಗ್ರ‍್ಪ್ಧ್ಘಿಡಿ¾್ಣ್ನ ಲ್ಲಿ ಭಾಗವಹಿಸಲು ಆಗಮಿ ಸಿದ್ದ ಅತಿಥಿಗಳ ವಿರುದ್ಧ ಕೆಲವು ವಿದ್ಯಾರ್ಥಿಗಳು ಚಪ್ಪಲಿ ಮತ್ತು ಬೂಟು ಗಳನ್ನು ಎತ್ತಿ ತೋರಿಸಿ ಘೋಷಣೆ ಕೂಗಿದ ಘಟನೆ ಸಂಸ್ಕೃತಿಹೀನ ಪ್ರತಿಭ ಟನೆಯ ಅತ್ಯಂತ ಕೆಳಮಟ್ಟದ ರೂಪ ಹಾಗೂ ರಾಜಕೀಯ ದಿವಾಳಿತನದ ಬಹಿರಂಗ ಪ್ರದರ್ಶನವಾಗಿದೆ ಎಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ಅಡ್ವ. ಕೆ. ಶ್ರೀಕಾಂತ್ ಹೇಳಿದರು.
ತಮಗೆ ಇಷ್ಟವಿಲ್ಲದ ವಿಚಾರಧಾರೆ ಯವರು ಒಂದು ವಿಚಾರ ಗ್ರ‍್ಪ್ಧ್ಘಿಡಿ¾್ಣ್ನ ಲ್ಲಿ ಭಾಗವಹಿಸುವುದನ್ನೂ ಸಹಿಸಿಕೊಳ್ಳ ಲಾಗದ ಅಸಹಿಷ್ಣುತೆ ಈ ಘಟನೆಯ ಮೂಲಕ ಬಹಿರಂಗವಾಗಿದೆ. ವಿಚಾರಗಳನ್ನು ವಿಚಾರಗಳಿಂದ ಎದುರಿಸುವ ಸಾಮರ್ಥ್ಯವಿಲ್ಲದವರೇ ಕೊನೆಗೆ ಚಪ್ಪಲಿ ಮತ್ತು ಬೂಟುಗಳನ್ನು ಎತ್ತಿ ತೋರಿಸುತ್ತಾರೆ ಎಂದು ಅವರು ಟೀಕಿಸಿದರು.
ಅಸಮ್ಮತಿ ವ್ಯಕ್ತಪಡಿಸುವ ಹಕ್ಕನ್ನು ಬಿಜೆಪಿ ಎಂದಿಗೂ ಪ್ರಶ್ನಿಸುವುದಿಲ್ಲ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಅತಿಥಿಗಳನ್ನು ಅವಮಾನಿಸುವುದು ಹಾಗೂ ಚಪ್ಪಲಿ ಮತ್ತು ಬೂಟುಗಳನ್ನು ಎತ್ತಿ ತೋರಿಸುವುದು ಪ್ರಜಾಸತ್ತಾತ್ಮಕ ಹಕ್ಕಿನ ನೆಪದಲ್ಲಿ ನಡೆಯುವ ರಾಜಕೀಯ ಅಪಕ್ವತೆ ಮತ್ತು ಸಂಸ್ಕೃತಿಹೀನತೆಯಾಗಿದೆ ಎಂದು ಶ್ರೀಕಾಂತ್ ಹೇಳಿದರು.
ಆÁ್ವಉ್ಚ್ವಉಸ್ ವಿಚಾರಧಾರೆಯ ಚಿಂತಕರು ಭಾಗವಹಿಸುವುದಕ್ಕೆ ವಿರೋ ಧವಿದ್ದರೆ ಅವರ ವಿಚಾರಗಳನ್ನು ಟೀಕಿಸಲಿ. ವೇದಿಕೆಯಲ್ಲಿ ವಾದಿಸಲಿ. ಒಂದು ವಿಚಾರವನ್ನು ಎದುರಿಸಲು ಚಪ್ಪಲಿ ಎತ್ತಿ ತೋರಿಸಬೇಕಾದ ಪರಿಸ್ಥಿತಿಯೇ ಆ ಪ್ರತಿಭಟನೆಯ ಬೌದ್ಧಿಕ ದಾರಿದ್ರ‍್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯಗಳು ಜ್ಞಾನ ಮತ್ತು ವಿಚಾರ ವಿನಿಮಯದ ಕೇಂದ್ರಗಳಾಗಿವೆ. ತಮಗೆ ಇಷ್ಟವಿಲ್ಲದ ವಿಚಾರವನ್ನು ಕೇಳಲೂ ಸಾಧ್ಯವಾಗದ ಅಸಹಿಷ್ಣುತೆ ಯನ್ನು ಬೆಳೆಸುವುದು ವಿಶ್ವವಿದ್ಯಾಲ ಯದ ಸಂಸ್ಕೃತಿಗೆ ಮಾಡುವ ಅವಮಾನವಾಗಿದೆ ಎಂದು ಶ್ರೀಕಾಂತ್ ಟೀಕಿಸಿದರು.
ಚಪ್ಪಲಿ ಮತ್ತು ಬೂಟುಗಳನ್ನು ಎತ್ತಿ ತೋರಿಸಿದ ಮಾತ್ರಕ್ಕೆ ಯಾವುದೇ ವಿಚಾರವೂ ಕುಸಿಯುವುದಿಲ್ಲ. ಆದರೆ ಪ್ರತಿಭಟನೆಯ ಮಟ್ಟ ಖಂಡಿತವಾಗಿಯೂ ಕುಸಿದಿದೆ.
ಕ್ಯಾಂಪಸ್‌ಗಳಲ್ಲಿ ಚಪ್ಪಲಿಗಳು ಎತ್ತರಕ್ಕೆ ಏರಬೇಕಾಗಿಲ್ಲ; ವಿಚಾರಗಳೇ ಎತ್ತರಕ್ಕೆ ಏರಬೇಕು. ಘೋಷಣೆಗಳ ಗದ್ದಲವಲ್ಲ, ಸಂವಾದ ಮತ್ತು ವಾದಗಳ ಶಕ್ತಿಯೇ ಕ್ಯಾಂಪಸ್ ರಾಜಕೀಯದ ಮಟ್ಟವನ್ನು ನಿರ್ಧರಿಸಬೇಕು. ಚಪ್ಪಲಿ ಎತ್ತುವ ರಾಜಕೀಯ ಸಮಾಜಕ್ಕೆ ಅಗತ್ಯವಿಲ್ಲ ಎಂದು ಶ್ರೀಕಾಂತ್ ಸ್ಪಷ್ಟಪಡಿಸಿದರು.
ಇಂತಹ ಸಂಸ್ಕೃತಿಹೀನ ಪ್ರದರ್ಶನಗಳನ್ನು ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕ ಸಮಾಜ ಬಲವಾಗಿ ತಿರಸ್ಕರಿಸಬೇಕು ಎಂದು ಅವರು ಮನವಿ ಮಾಡಿದರು.






