ಕಾಸರಗೋಡು: ಜಿಲ್ಲೆಯಲ್ಲಿ ಪ್ರಥಮ ಸರಕಾರಿ ಇಂಜಿನಿಯರಿಂಗ್ ಕಾಲೇಜು ಚೆರ್ವತ್ತೂರಿನಲ್ಲಿ ಆರಂಭಿಸಲಿರುವ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ಟೆಕ್ನಿಕಲ್ ಹೈಸ್ಕೂಲ್ ಆವರಣದಲ್ಲಿ ಕಾಲೇಜು ಆರಂಭಗೊಳ್ಳಲಿದೆಯೆಂದು ಉನ್ನತ ಶಿಕ್ಷಣ ಸಚಿವೆ ಡಾ. ಆರ್. ಬಿಂದು ಶಾಸಕ ಎಂ. ರಾಜಗೋಪಾಲನ್ರಿಗೆ ತಿಳಿಸಿದ್ದಾರೆ. ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಲಾಗಿದೆ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರನ್ನು ನೋಡೆಲ್ ಆಫೀಸರ್ಆಗಿ ನೇಮಕ ಮಾಡಲಾಗಿದೆ. ಬಿಟೆಕ್ ಕೋರ್ಸ್ ಆರಂಭಗೊಳಿಸುವ ಸಿದ್ಧತೆ ನಡೆಸಲಾಗಿದೆ.
