ಬುಲ್ಲೆಟ್‌ಗೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಮಗುಚಿ ಬಿದ್ದ ಲಾರಿ

 ಕಾಸರಗೋಡು: ಗೂಗಲ್ ಮ್ಯಾಪ್ ನೋಡಿ ಚಲಾಯಿಸಿದ ಲಾರಿ ಕುತ್ತಿಕ್ಕೋಲ್ ವಟ್ಟಂತಟ್ಟದಲ್ಲಿ ಬುಲ್ಲೆಟ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಪ್ರಪಾತಕ್ಕೆ ಮಗುಚಿದೆ. ಢಿಕ್ಕಿಯ ಆಘಾತದಿಂದ ಬುಲ್ಲೆಟ್‌ನ ಸವಾರರು ಎಸೆಯಲ್ಪಟ್ಟ ಕಾರಣ  ದೊಡ್ಡ ದುರಂತ ತಪ್ಪಿಹೋಗಿದೆ. ನಿನ್ನೆ ರಾತ್ರಿ 8.30ರ ವೇಳೆ ಕುತ್ತಿಕ್ಕೋಲ್- ಕಾನತ್ತೂರು ರಸ್ತೆಯ ವಟ್ಟಂತಟ್ಟ ಇಳಿಜಾರಿನಲ್ಲಿ ಅಪಘಾತ ಸಂಭವಿ ಸಿದೆ. ತಮಿಳುನಾಡಿನಿಂದ ಕಾಸರಗೋ ಡಿಗೆ ಆಗಮಿಸುತ್ತಿದ್ದ ಲಾರಿ ಯ ಚಾಲಕ ಗೂಗಲ್ ಮ್ಯಾಪ್ ನೋಡಿ ಲಾರಿ ಚಲಾಯಿಸುತ್ತಿದ್ದನು. ವಟ್ಟಂತಟ್ಟ ಇಳಿಜಾರಿಗೆ ತಲುಪಿದಾಗ ಲಾರಿಯ ಬ್ರೇಕ್ ಡೌನ್ ಆಗಿ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಬುಲ್ಲೆಟ್‌ಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಮಾಹಿತಿ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳ ತಲುಪಿ ಲಾರಿಯೊಳಗೆ ಸಿಲುಕಿದ್ದ ಚಾಲಕನನ್ನು ಪಾರು ಮಾಡಿದ್ದಾರೆ. ಚಾಲಕನಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದೆ.

You cannot copy contents of this page