ಪುತ್ತಿಗೆ ಬ್ಲೋಕ್ ಪಂಚಾಯತ್ ಡಿವಿಶನ್‌ನಲ್ಲಿ ಪ್ರಧಾನ ಸ್ಪರ್ಧೆ ಕಾಂಗ್ರೆಸ್-ಕಾಂಗ್ರೆಸ್ ಮಧ್ಯೆ; ಬಿಜೆಪಿ, ಸಿಪಿಎಂಗೆ ಕೌತುಕ

ಕುಂಬಳೆ: ನಾಮಪತ್ರ ಸಮರ್ಪಣೆ ದಿನಾಂಕ ಕೊನೆಗೊಂಡ ಬಳಿಕ ಚುನಾವಣೆ ಚಿತ್ರ ಸ್ಪಷ್ಟಗೊಂಡಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಪುತ್ತಿಗೆ ಡಿವಿಷನ್‌ನಲ್ಲಿ ಪ್ರದಾನ ಪಕ್ಷಗಳ ಅಭ್ಯರ್ಥಿಗಳೆಲ್ಲಾ ರಂಗದಲ್ಲಿದ್ದರೂ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆಯಾಗಿದೆ ಎಂಬುದು ಸ್ಪಷ್ಟಗೊಂಡಿತು. ಕಾಂಗ್ರೆಸ್‌ನ ಔದ್ಯೋಗಿಕ ಅಭ್ಯರ್ಥಿಯಾಗಿ ಯೂತ್ ಮುಖಂಡ ಜುನೈದ್ ಸ್ಪರ್ಧಿಸುವ ಈ ಡಿವಿಷನ್‌ನಲ್ಲಿ ಕಾಂಗ್ರೆಸ್‌ನ ಪ್ರಧಾನ ಮುಖಂಡ, ಕೃಷಿ ಸಂಘಟನಾ ನೇತಾರನಾದ ಶುಕೂರ್ ಕಾಣಾಜೆ ಕೂಡಾ ನಾಮಪತ್ರ ಸಮರ್ಪಿಸಿ ಸ್ಪರ್ಧಾರಂಗದಲ್ಲಿದ್ದಾರೆ. ಅಭ್ಯರ್ಥಿನಿರ್ಣ ಯದಲ್ಲಿ ಪಕ್ಷದ ನೇತೃತ್ವ ನಿಷ್ಪಕ್ಷವಾದ ನಿಲುವು ಕೈಗೊಂಡಿಲ್ಲವೆಂಬುದು ಶುಕೂರ್ ನಾಮಪತ್ರ ಸಲ್ಲಿಸಲು ಕಾರಣವೆಂದು ತಿಳಿದು ಬಂದಿದೆ. ಕೃಷಿವಲಯಕ್ಕೆ ಸಂಬಂ ಧಿಸಿ ರಾಜ್ಯ ಮಟ್ಟದಲ್ಲಿ ನಡೆದಿದ್ದ ಹಲ ವಾರು ವಂಚನೆಗಳು,  ಅವ್ಯವಹಾರಗಳನ್ನು, ವಿದ್ಯುತ್ ಇಲಾಖೆಯ ಹಗಲು ದರೋಡೆ ವಿರುದ್ಧ ರಂಗಕ್ಕೆ ಇಳಿದು ಅದರ ವಿರುದ್ಧ ಪ್ರಥಮವಾಗಿ ಏಕಾಂಗಿ ಹೋರಾಟ ನಡೆಸಿದ್ದ ಶುಕೂರ್ ಬಳಿಕ ಕೃಷಿಕರ ಸಂಘವನ್ನು ರೂಪೀಕರಿಸಿದರು. ಕೃಷಿಗೆ ಸಬ್ಸಿಡಿ, ಗೊಬ್ಬರ ವಿತರಣೆಯಲ್ಲಿನ ವಂಚನೆ, ಅವ್ಯವಹಾರ, ಬೀಜ ವಿತರಣೆಯಲ್ಲಿನ ಅವ್ಯವಹಾರ, ಸಾವಯವ ಗೊಬ್ಬರ ವಿತರಣೆಯಲ್ಲಿನ ಅವ್ಯವಹಾರ ಮೊದಲಾದ ಕೃಷಿರಂಗಕ್ಕೆ ಸಂಬಂಧಿಸಿದ ಅವ್ಯವಹಾರಗಳ ವಿರುದ್ಧ ಶುಕೂರ್ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಿದ್ದರು. ಮಾತ್ರವಲ್ಲ ಕೃಷಿ ಇಲಾಖೆಯಿಂದ ಕೃಷಿಕರಿಗೆ ಲಭಿಸಬೇಕಾದ ನ್ಯಾಯವಾದ ಹಲವಾರು ಭರವಸೆಗಳು, ಸಬ್ಸಿಡಿಗಳನ್ನು ಕೃಷಿಕರಿಗೆ ಲಭ್ಯಗೊಳಿಸಿಕೊ ಡಲು ಶುಕೂರ್‌ರ ಮಧ್ಯಪ್ರವೇಶದಿಂದ ಸಾಧ್ಯವಾಗಿದೆ. ಇದರೊಂದಿಗೆ ನಾಡಿನ ಪ್ರಗತಿಪರ ಚಟುವಟಿಕೆಗಳಿಗೆ, ಸಾರ್ವಜನಿಕ ಸಮಸ್ಯೆಗಳಿಗೆ ಶುಕೂರ್ ಮದ್ಯಪ್ರವೇಶ ನಡೆಸುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.

ಈ ರೀತಿಯ ಚಟುವಟಿಕೆಗಳಿಗೆ, ಅದನ್ನು ಮುಂದುವರಿಸಲು ಜನಪ್ರತಿನಿಧಿ ಎಂಬ ಅಂಗೀಕಾರ ಇನ್ನಷ್ಟು ಸಹಾಯಕವಾಗಬಹುದೆಂದು ಸ್ಥಳೀಯರು ನುಡಿಯುತ್ತಾರೆ. ಕಾಂಗ್ರೆಸ್ ಸಹಿತ ಈ ಡಿವಿಶನ್‌ನಲ್ಲಿ ಸ್ಪರ್ಧಿಸುವ ಸಿಪಿಎಂ,  ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಮತದಾರರಲ್ಲಿ ಭಿನ್ನಾಭಿಪ್ರಾಯವಿಲ್ಲ. ಇದೇ ವೇಳೆ ಜುನೈದ್ ಹಾಗೂ ಶುಕೂರ್ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿರುವುದನ್ನು ಕಾಂಗ್ರೆಸ್, ಸಿಪಿಎಂ, ಬಿಜೆಪಿ ನಿರೀಕ್ಷಿಸುತ್ತಿದೆ.

ಕಳೆದ ಚುನಾವಣೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಪುತ್ತಿಗೆ ಡಿವಿಷನ್‌ನಲ್ಲಿ ಸಿಪಿಎಂ ಅಭ್ಯರ್ಥಿ ಜಯಗಳಿಸಿರುವುದು. ಈ ಚುನಾವಣೆಯಲ್ಲಿ ಆ ಡಿವಿಶನ್‌ನಲ್ಲಿದ್ದ  ಪುತ್ತಿಗೆ ಪಂಚಾಯತ್‌ನ ಐದು ವಾರ್ಡ್‌ಗಳು, ಎಣ್ಮಕಜೆ, ಪೈವಳಿಕೆ ಪಂಚಾಯತ್‌ಗಳ ಎರಡು ವಾರ್ಡ್‌ಗಳನ್ನು ಬೇರ್ಪಡಿಸಿ ಪೆರ್ಮುದೆ ಬ್ಲೋಕ್ ಪಂಚಾಯತ್ ಡಿವಿಶನ್ ಹೊಸತಾಗಿ ರೂಪೀಕರಿಸಲಾಗಿದೆ. ಇದರಲ್ಲಿ ಪುತ್ತಿಗೆ ಪಂಚಾಯತ್‌ನಿಂದ ಸೇರಿಸಿದ ಐದು ವಾರ್ಡ್‌ಗಳಲ್ಲಿ, ಪೈವಳಿಕೆ ಪಂಚಾಯತ್‌ನ ಎರಡು ವಾರ್ಡ್‌ಗಳು ಸಿಪಿಎಂ ಕೇಂದ್ರಗಳಾಗಿತ್ತು ಎಂದು ಹೇಳಲಾಗುತ್ತಿದೆ. ಎಣ್ಮಕಜೆ ಪಂಚಾಯತ್‌ನಿಂದ ಪೆರ್ಮುದೆ ಬ್ಲೋಕ್ ಪಂಚಾಯತ್ ಡಿವಿಶನ್‌ಗೆ  ಸೇರಿಸಿದ ಎರಡು ವಾರ್ಡ್‌ಗಳು ಬಿಜೆಪಿ- ಕಾಂಗ್ರೆಸ್‌ಗೆ ಹೆಚ್ಚು ಸ್ವಾಧೀನವಿರುವ ವಾರ್ಡ್‌ಗಳಾಗಿವೆ. ಪುತ್ತಿಗೆ ಡಿವಿಶನ್‌ನಲ್ಲಿ ಈ ಚುನಾವಣೆಯಲ್ಲಿ ಉಂಟಾಗಿರುವ ಭೂಮಿಪರವಾದ ಬದಲಾವಣೆ ಚುನಾವಣೆಯ ಫಲಿತಾಂಶದಲ್ಲಿ ಪ್ರಕಟವಾಗಬಹುದೆಂದು ಮತದಾರರು ತಿಳಿಸುತ್ತಾರೆ.

RELATED NEWS

You cannot copy contents of this page