ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆಗೈದು ಪಕ್ಷವನ್ನು ದುರ್ಬಲಗೊಳಿಸಬಹುದೆಂಬ ದುರುದ್ದೇಶ ಈಡೇರದು- ಬಿ.ಪಿ. ಪ್ರದೀಪ್ ಕುಮಾರ್

ಪೆರ್ಲ: ಯುವ ಕಾಂಗ್ರೆಸ್ ಮಂಡಲ ಕಾರ್ಯದರ್ಶಿಯಾಗಿದ್ದ ಜಬ್ಬಾರ್ ಪೆರ್ಲರನ್ನು ಹತ್ಯೆಗೈದು ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸ ಬಹುದೆಂಬ ದುರುದ್ದೇಶ ಹೊಂದಿದವರ ಆಶಯ ಈಡೇರಲಿಲ್ಲ. ಬದಲಾಗಿ ಅವರ ರಕ್ತದಿಂದ ಸ್ಪೂರ್ತಿ ಪಡೆದು ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಿ ಬೆಳೆದಿವೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಪಿ. ಪ್ರದೀಪ್ ಕುಮಾರ್ ನುಡಿದರು. ಎಣ್ಮಕಜೆ ಇಂಡ್ಯನ್ ನೇಶನಲ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್‌ನ ಜಂಟಿ ಆಶ್ರಯದಲ್ಲಿ ಪೆರ್ಲ ಇಂದಿರಾ ಭವನದಲ್ಲಿ ನಡೆದ ೧೭ನೇ ವರ್ಷದ ಜಬ್ಬಾರ್ ಹುತಾತ್ಮ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಗಾಂಭೀರ ಅಧ್ಯಕ್ಷತೆ ವಹಿಸಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ ಜೆ.ಎಸ್, ಲಕ್ಷ್ಮಣ ಪ್ರಭು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕೇಯನ್ ಪೆರಿಯ, ಎಣ್ಮಕಜೆ ಪಂ. ಅಧ್ಯಕ್ಷೆ ಕುಸುಮಾವತಿ ಟೀಚರ್, ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಲೋಕನಾಥ್ ಶೆಟ್ಟಿ, ಉಪಾಧ್ಯಕ್ಷ ಆಮು ಅಡ್ಕಸ್ಥಳ, ಶೆರಿಲ್ ಕಯ್ಯಾಂಕೂಡಲ್, ಜುನೈದ್ ಉರ್ಮಿ, ಬ್ಲೋಕ್ ಪಂ. ಸದಸ್ಯೆ ಮಿಸ್ರಿಯಾ ಕರೀಂ, ಪ್ರಿನ್ಸಿ ಸಹಿತ ಹಲವರು ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅಫ್ತಾಲ್ ಕಾಟುಕುಕ್ಕೆಯವರನ್ನು ಅಭಿನಂದಿಸಲಾಯಿತು.

ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ಫಾರೂಕ್ ಪಿ.ಎಂ. ಸ್ವಾಗತಿಸಿ, ಉಪಾಧ್ಯಕ್ಷ ನಜೀಬ್ ಶೇಣಿ ವಂದಿಸಿದರು.

.

RELATED NEWS

You cannot copy contents of this page