ಐ. ರಾಮರೈಯವರ ಕುಟುಂಬದೊಂದಿಗೆ ಕಾಂಗ್ರೆಸ್ ನಾಯಕತ್ವ ತೋರುವ ಅವಗಣನೆ ಅಪಮಾನಕರ- ಕೆ. ಶ್ರೀಕಾಂತ್

 ,  

ಕಾಸರಗೋಡು: ಜಿಲ್ಲೆಯ ಅಭಿವೃದ್ಧಿ ಹಾಗೂ ಕಾಂಗ್ರೆಸ್‌ನ ಬೆಳವಣಿಗೆಗೆ ಅಹೋರಾತ್ರಿ ನಿಸ್ವಾರ್ಥ ಸೇವೆಗೈದ, ಕಾಸರಗೋಡಿನ ಪ್ರಥಮ ಡಿಸಿಸಿ ಅಧ್ಯಕ್ಷ, ಲೋಕಸಭಾ ಮಾಜಿ ಸದಸ್ಯ, ನ್ಯಾಯವಾದಿ ಐ. ರಾಮ ರೈಯವರೊಂದಿಗೆ ಹಾಗೂ ಅವರ ಕುಟುಂಬದವರೊಂದಿಗೆ ಕಾಂಗ್ರೆಸ್ ನೇತೃತ್ವ ತೋರುವ ಅವಗಣನೆ ಅತ್ಯಂತ  ಅಪಮಾನಕರವಾಗಿದೆ ಎಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆರೋಪಿಸಿದರು.

ಸ್ವಂತ ಪಕ್ಷದ ಕಚೇರಿಯಲ್ಲಿ ಕೂಡಾ ಅವರ ಸ್ಮರಣೆಯನ್ನು ಉಳಿಸುವಂತೆ ಮಾಡಲು ಸಿದ್ಧರಾಗದ ಕಾಂಗ್ರೆಸ್, ಹೆಸರು ಇರಿಸಲು ಕುಟುಂಬದವರಲ್ಲಿ ಲಕ್ಷಾಂತರ ರೂ. ನೀಡಬೇಕೆಂದು ಒತ್ತಾಯಿಸಿರುವು ದಾಗಿ ಆರೋಪ ಕೇಳಿ ಬಂದಿದೆ. ಹಣಕ್ಕೆ ಮಾತ್ರವೇ ಮೌಲ್ಯ ಕಲ್ಪಿಸುವ ಕಾಂಗ್ರೆಸ್ ನೇತೃತ್ವದ ಜೀರ್ಣಿಸಿದ ರಾಜಕೀಯ ಇದರಿಂದ ಪ್ರಕಟಗೊಂಡಿದೆ. ರಾಮರೈಯವರ ಸ್ಮರಣೆಗಾಗಿ ಕಾಂಗ್ರೆಸ್ ಅಥವಾ ಐಕ್ಯರಂಗ ಏನೂ ಮಾಡಿಲ್ಲವೆಂಬುದು ಅತ್ಯಂತ ದುಃಖಕರವಾಗಿದೆ ಎಂದು ಶ್ರೀಕಾಂತ್ ತಿಳಿಸಿದರು. ಮುಸ್ಲಿಂ ಲೀಗ್ ಮುಖಂಡರಾದ ಪಾಣಕ್ಕಾಡ್ ಮೊಹಮ್ಮದಲಿ ಶಿಹಾಬ್ ತಂಙಳ್, ಹೈದರಲಿ ಶಿಹಾಬ್ ತಂಙಳ್‌ರ ಹೆಸರಲ್ಲಿ ಓರ್ವ ಜನಪ್ರತಿನಿಧಿಯಾಗಿಲ್ಲದೆಯೂ ಹಲವಾರು ಸಂಸ್ಥೆಗಳು, ಸ್ಮಾರಕಗಳು ಯುಡಿಎಫ್ ನೇತೃತ್ವ ನೀಡುವ ಪಂಚಾಯತ್  ಆಡಳಿತ ಸಮಿಗಳು ನಿರ್ಮಿಸಿವೆ. ಆದರೆ ಜನಪ್ರತಿನಿಧಿಯಾ ಗಿದ್ದು, ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ನಿಸ್ವಾರ್ಥವಾಗಿ ಕಾರ್ಯಾಚರಿಸಿದ ಐ. ರಾಮರೈಯವರನ್ನು ಕಾಂಗ್ರೆಸ್, ಐಕ್ಯರಂಗ ನಾಯಕತ್ವ ಮರೆತುಹೋಗಿದೆ. ಕಾಂಗ್ರೆಸ್ ಮುಖಂಡರನ್ನು ಮರೆತು ಮುಸ್ಲಿಂ ಲೀಗ್ ನೇತಾರರಿಗೆ ಮಾತ್ರ ಸ್ಮಾರಕ ನಿರ್ಮಿಸುವ ಐಕ್ಯರಂಗ ನಾಯಕತ್ವದ ಈ ದ್ವಿಮುಖ ನೀತಿಯನ್ನು ಕಾಂಗ್ರೆಸ್ ಕಾರ್ಯಕರ್ತರು ತಿಳಿದುಕೊಳ್ಳಬಹುದು ಎಂದು ಅವರು ನುಡಿದರು. ಆತ್ಮಾಭಿಮಾನ ವಿರುವ ಕಾಂಗ್ರೆಸ್‌ನವರು ಇದನ್ನು ಯಾವುದೇ ಕಾರಣದಿಂದ ಅಂಗೀಕರಿಸಲು ಸಾಧ್ಯವಿಲ್ಲವೆಂದು ಶ್ರೀಕಾಂತ್ ನುಡಿದರು.

You cannot copy contents of this page