ಉಪ್ಪಳ: ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣೆಗಾಗಿ ಹೋರಾಟ ಸ್ಥಳಕ್ಕೆ ಪ್ರತಾಪನಗರದಿಂದ ಧರ್ಮರಕ್ಷಾ ಸಮಿತಿ ನೇತೃತ್ವದಲ್ಲಿ ನೂರಾರು ಭಕ್ತರು ನಿನ್ನೆ ಸಂಜೆ ಪಾದಯಾತ್ರೆ ಮೂಲಕ ತಲು ಪಿದರು. ಪ್ರತಾಪನಗರ ಗಣೇಶ ಮಂದಿರ ಹಾಗೂ ಗುಳಿಗ ಬನದಲ್ಲಿ ಪ್ರಾರ್ಥಿಸಿ ಪಾದಯಾತ್ರೆ ಆರಂಭಿಸಲಾಗಿದೆ. ಮಾತೆಯರ ಸಹಿತ ನೂರಾರು ಭಕ್ತರು ಪಾಲ್ಗೊಂಡರು.
ಜೋಡುಕಲ್ಲು ಸಂರಕ್ಷಣೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಭಜನೆ, ಯಾಗ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈಗಲೂ ಮುಂದುವರಿ ಯುತ್ತಿದೆ. ಮಂದಿರ ಸಂರಕ್ಷಣೆಗಾಗಿ ನಿನ್ನೆ ಸಂಜೆ ಸ್ಥಳದಲ್ಲಿ ಗುಳಿಗ ದೈವಕೋಲ ನಡೆಯಿತು. ನ.1ರಂದು ಸಂಜೆ 3 ಗಂಟೆಗೆ ಜೋಡುಕಲ್ಲು ಚಲೋ ಜಾಗೃತಿ ಹಿಂದೂ ಶಕ್ತಿಸಂಗಮ ಕಾರ್ಯಕ್ರಮವನ್ನು ಜೋಡುಕಲ್ಲು ಜಂಕ್ಷನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.




