ಬೀಗ ಹಾಕಿದ ಮನೆಯಿಂದ ಕಳವು ಪೊಲೀಸರಿಂದ ತನಿಖೆ ತೀವ್ರ

ಮಂಜೇಶ್ವರ: ಬೀಗ ಹಾಕಿದ ಮನೆಯ ಬಾಗಿಲು ಮುರಿದು ನಗದು ಸಹಿತ ಚಿನ್ನ ಕಳವುಗೈದ ಘಟನೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ದ್ದಾರೆ. ತೂಮಿನಾಡು ಸರಸ್ವತಿ ನಗರ ನಿವಾಸಿ ದಿ| ನ್ಯಾಯವಾದಿ ಯೋಗೇಂದ್ರ ಆಚಾರ್ಯರ ಮನೆಯಲ್ಲಿ ಕಳವು ನಡೆದಿದೆ. ಒಂದು ಲಕ್ಷ ರೂ. ಮತ್ತು ಚಿನ್ನದ ಉಂಗುರ ಕಳವು ನಡೆಸಲಾಗಿದೆ. ಇವರ ಪತ್ನಿ ಜಲಜಾಕ್ಷಿ ಶನಿವಾರ ಸಂಜೆ ಮನೆಗೆ ಬೀಗ ಹಾಕಿ ತಲಪಾಡಿ ದೇವಿ ನಗರದಲ್ಲಿರುವ ಸಹೋದರನ ಮನೆಗೆ ತೆರಳಿದ್ದರು. ಅಲ್ಲಿಂದ ಭಾನುವಾರ ಸಂಜೆ ಮನೆಗೆ ತಲುಪಿದಾಗ ಮುಂಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬAದಿದೆ. ಒಳಗೆ ಹೋಗಿ ನೋಡಿದಾಗ ಕೊಠಡಿ ಯಲ್ಲಿರುವ ಕಪಾಟನ್ನು ಮುರಿದು ಬಟ್ಟೆ ಬರೆ ಚೆಲ್ಲಾಪಿಲ್ಲಿಗೊಳಿಸ ಲಾಗಿದ್ದು, ಹಣ ಹಾಗೂ ಚಿನ್ನ ಕಳ್ಳರು ದೋಚಿದ ಬಗ್ಗೆ ಗಮನಕ್ಕೆ ಬಂದಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅಲ್ಲದೆ ಶನಿವಾರ ರಾತ್ರಿ ಉಪ್ಪಳ ಬಸ್ ನಿಲ್ದಾಣ ಬಳಿಯಿ ರುವ 4 ಅಂಗಡಿಗಳ ಶಟರ್ ಮುರಿದು ಕಳವಿಗೆ ಯತ್ನಿಸಿದ ಘಟನೆ ನಡೆದಿದೆ. ಕಳೆದ ಹಲವು ದಿನಗಳಿಂದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಕಳವು ನಡೆಯುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

You cannot copy contents of this page