ಪುತ್ತಿಗೆ: ಪುತ್ತಿಗೆ ಬಾಡೂರಿನಲ್ಲಿ ವ್ಯಾಪಕ ಕಳವು ನಡೆದ ಬಗ್ಗೆ ದೂರಲಾ ಗಿದೆ. ಇಲ್ಲಿನ ಅಕ್ಷಯ ಸೆಂಟರ್, ಹೋಟೆಲ್ ಹಾಗೂ ಮೂರು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು 1 ಲಕ್ಷ ರೂಪಾಯಿಯಷ್ಟು ಮೊತ್ತ ವನ್ನು ದೋಚಿದ್ದಾರೆ. ನಿನ್ನೆ ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಬಾಲಕೃಷ್ಣ ಶೆಟ್ಟಿ ಎಂಬವರ ‘ಅಮ್ಮ’ ಹೋಟೆಲ್, ಸುರೇಶ್ ಬಾಡೂರು ಅವರ ಶಿವದುರ್ಗ ಸ್ಟೋರ್, ರಾಜೇಶ್ ಶೆಟ್ಟಿಯವರ ದುರ್ಗಾಲಕ್ಷ್ಮಿ ಸ್ಟೋರ್, ಇಬ್ರಾಹಿಂರ ಅಕ್ಷಯ ಸೆಂಟರ್, ಕೊರಗಪ್ಪರ ಬಿ.ಕೆ. ಟೈಲರ್ಸ್ ಅಂಗಡಿ ಎಂಬೆಡೆಗಳಿಂದ ಕಳವು ನಡೆದಿದೆ. ಎಲ್ಲಾ ಅಂಗಡಿಗಳ ಶಟರ್‌ನ ಬೀಗ ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.







