ಕುಂಬಳೆ: ಅಲ್ಪ ಬಿಡುವಿನ ಬಳಿಕ ಕುಂಬಳೆಯಲ್ಲಿ ಮತ್ತೆ ಕಳ್ಳತನ ನಡೆದಿದೆ. ಇಲ್ಲಿನ ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ| ಮಮ್ಮಿಞ್ಞಿ ಹಾಜಿ ಯವರ ಕುಂಬಳೆ ಪೇಟೆಯಲ್ಲಿರುವ ಮನೆಯಲ್ಲಿ ನಿನ್ನೆ ಕಳವು ನಡೆದಿದೆ. ಮಮ್ಮಿಞ್ಞಿ ಹಾಜಿಯವರ ಪತ್ನಿ ಸೈನಬಾ, ಮಗ ರಿಸ್ವಾನ್ ಹಾಗೂ ಸೊಸೆ ಚೆಂಗಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಕಳವು ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕುಟುಂಬ ಮನೆಗೆ ಬೀಗ ಜಡಿದು ತೆರಳಿತ್ತು. ರಾತ್ರಿ 12 ಗಂಟೆ ವೇಳೆ ಮರಳಿ ಬಂದಾಗ ಮನೆಯ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಎರಡು ಕಪಾಟುಗಳನ್ನು ಮುರಿದು ಬಟ್ಟೆಬರೆ ಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಅಲ್ಲದೆ ಬೆಲೆಬಾಳುವ ಎರಡು ವಾಚ್‌ಗಳನ್ನು ಕಳವು ನಡೆಸಿರುವುದು ತಿಳಿದುಬಂದಿದೆ. ಅಡುಗೆ ಕೋಣೆ ಭಾಗದ ಬಾಗಿಲನ್ನು ಕೂಡಾ ಮುರಿದು ಬಳಿಕ ಎರಡೂ ಬಾಗಿಲುಗಳ ಬೀಗಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ.
ಕುಂಬಳೆ ಪೇಟೆಯಲ್ಲಿ ಕಾರ್ಯಾಚರಿಸುವ ಸ್ಟೇಶನರಿ ಅಂಗಡಿಯಲ್ಲೂ ನಿನ್ನೆ ರಾತ್ರಿ ಕಳವು ನಡೆದಿದೆ. ಕುಂಟಂಗೇರಡ್ಕದ ರಮೇಶ್ ನಾಯ್ಕ್‌ರ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು 6 ಸಾವಿರ ರೂ.ಗಳನ್ನು ಕಳವು ನಡೆಸಿದ್ದಾರೆ. ರಮೇಶ್ ನಾಯ್ಕ್‌ರ ಅಂಗಡಿಯಲ್ಲಿ ಕಳವು ನಡೆಯುತ್ತಿರು ವುದು ಇದು ನಾಲ್ಕನೇ ಬಾರಿಯಾ ಗಿದೆ. ಈ ಎರಡು ಕಳವು ಪ್ರಕರಣ ಗಳಲ್ಲೂ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.







