ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಮೂರು ಅಂಗಡಿಗಳಿಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ. ಇಲ್ಲಿನ ಅಶ್ರಫ್ ಎಂಬವರ ಭಾರತ್ ಜನರಲ್ ಸ್ಟೋರ್, ಜಾಬಿರ್‌ರ ಮೊಬೈಲ್ ಅಂಗಡಿ, ಶಫೀಕ್‌ರ ತರಕಾರಿ ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ. ಭಾರತ್ ಜನರಲ್ ಸ್ಟೋರ್‌ನಿಂದ ೩೫ ಸಾವಿರ ರೂಪಾಯಿ ನಗದು ಹಾಗೂ ಸಿಗರೇಟ್ ಮೊದಲಾದ ವುಗಳನ್ನು ಕಳವುಗೈಯ್ಯಲಾಗಿದೆ. ಮತ್ತೆರಡು ಅಂಗಡಿಗಳಿಂದ ಕಳವು ಯತ್ನ ಮಾತ್ರವೇ ನಡೆದಿದೆಯೆಂದು ಹೇಳಲಾಗುತ್ತಿದೆ. ವ್ಯಾಪಾರಿಗಳು ಇಂದು ಬೆಳಿಗ್ಗೆ ತಲುಪಿದಾಗಲೇ ಅಂಗಡಿಗಳ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.







