ಮಂಜೇಶ್ವರ: ಇಲ್ಲಿನ ರಾಗಂ ಜಂಕ್ಷನ್‌ನಲ್ಲಿ ಒಂದು ಅಂಗಡಿಯಿಂದ ಕಳವು, ಎರಡು ಅಂಗಡಿಗಳಿಂದ ಕಳವಿಗೆತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮೊನ್ನೆ ರಾತ್ರಿ ಕಳವು ನಡೆದಿದ್ದು, ಅಶ್ರಫ್ ಎಂಬವರ ಭಾರತ್ ಜನರಲ್ ಸ್ಟೋರ್‌ನಿಂದ ೩೫,೦೦೦ ರೂ. ಮತ್ತು 10,೦೦೦ ರೂ. ಮೌಲ್ಯದ ಸಾಮಗ್ರಿ ಕಳವುಗೈಯ್ಯಲಾಗಿತ್ತೆಂದು ದೂರಲಾಗಿದೆ. ಅಲ್ಲದೆ ಪರಿಸರದ ಜಾಬಿರ್ ಎಂಬವರ ಮೊಬೈಲ್ ಅಂಗಡಿ ಶಫೀಕ್ ಎಂಬವರ ಅಂಗಡಿಯಿಂದ ಕಳವಿಗೆ ಯತ್ನಿಸಲಾಗಿದೆ. ಈ ಪರಿಸರದಲ್ಲಿರುವ ಸಿಸಿ ಕ್ಯಾಮರಾವನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸುತ್ತಿರುವುದಾಗಿ ಸಿ.ಐ. ಅಜಿತ್ ಕುಮಾರ್ ಪಿ. ತಿಳಿಸಿದ್ದಾರೆ.







