ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ವಿದೇಶಿ ಕರೆನ್ಸಿ, ನಗದು, ವಾಚ್‌ಗಳು ಕಳವು

ಕುಂಬಳೆ: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ವಿದೇಶಿ ಕರೆನ್ಸಿ, ನಗದು ಹಾಗೂ ವಾಚ್‌ಗಳನ್ನು ಕಳವುಗೈದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ.

ಕಯ್ಯಾರು ಕೊಕ್ಕೆಚ್ಚಾಲ್ ಉಬೈಸ್ ಮಂಜಿಲ್‌ನ ಉಮ್ಮರ್ ಉಸೈದ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.   ಈತಿಂಗಳ ೧೨ರಂದು ಮನೆಯವರು ಬೀಗ ಜಡಿದು ಕಲ್ಲಿಕೋಟೆಗೆ ಹೋಗಿದ್ದರು. ಆ ಬಳಿಕ ಮನೆ ಮನೆಗೆ ಬಂದಾಗ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಅದರಂತೆ ಉಮ್ಮರ್ ಉಸೈದ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಈತಿಂಗಳ 12ರಂದು 12 ಗಂಟೆಯಿಂದ ನಿನ್ನೆ 8 ಗಂಟೆಯೊಳಗಿನ ಯಾವುದೋ ಸಮಯದಲ್ಲಿ ಮನೆಯ ಬೀಗ ಒಡೆದು ಕಪಾಟಿನೊಳಗಿದ್ದ ಎರಡು ಬಿಟ್ಟೋ ವಾಚ್‌ಗಳು, ಒಂದು ರ‍್ಯಾಡೋ ವಾಚ್, 5೦,೦೦೦ರೂ.ನಗದು ಹಾಗೂ 1೦೦೦ ಯುಎಇ ದಿರ್ಹಾಂ ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page