ಬೇಳ ಗ್ರಾಮ ಕಚೇರಿಗೆ ಕಳ್ಳರ ದಾಳಿ

ಬದಿಯಡ್ಕ: ನೀರ್ಚಾಲಿನಲ್ಲಿರುವ ಬೇಳ ಗ್ರಾಮ ಕಚೇರಿಗೆ ಕಳ್ಳರು ನುಗ್ಗಿದ್ದಾರೆ. ನಿನ್ನೆ ರಾತ್ರಿ ಕಚೇರಿಗೆ ಕಳ್ಳರು ನುಗ್ಗಿರುವು ದಾಗಿ ಅಂದಾಜಿಸಲಾಗಿದೆ. ಕಚೇರಿ ಯಲ್ಲಿದ್ದ ಮೂರು ಲ್ಯಾಪ್‌ಟೋಪ್ ಗಳನ್ನು  ಕಳವು   ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬೇರೆ ಯಾವುದಾದರೂ ದಾಖಲೆಪತ್ರಗಳನ್ನು ಕಳವು ನಡೆಸಿದ್ದಾರೆಯೇ ಎಂಬುವುದನ್ನು ಇನ್ನಷ್ಟೇ ತಿಳಿಯಬೇಕಾಗಿದೆ. ಕಳವುಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಇಲ್ಲಿನ ಗ್ರಾಮಾಧಿಕಾರಿ ಶಶಿ ಎಂಬವರು ಇಂದು ಬೆಳಿಗ್ಗೆ ಕಚೇರಿಗೆ ತಲುಪಿದಾಗಲೇ ಕಳವು ವಿಷಯ ಅರಿವಿಗೆ ಬಂದಿದೆ. ಕಚೇರಿಯ ಬಾಗಿಲಿನ  ಬೀಗ ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ.

You cannot copy contents of this page