ತಿರುವೋಣಂ ಬಂಪರ್: ಜಿಲ್ಲೆಯಲ್ಲಿ ಈತನಕ ಮಾರಾಟವಾಗಿದ್ದು 2.59 ಲಕ್ಷ ಟಿಕೆಟ್‌ಗಳು

ಕಾಸರಗೋಡು: ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳು ಸೆ. 26ರ ತನಕದ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ 2.59 ಲಕ್ಷ ಮಾರಾಟ ವಾಗಿದೆ. ಅಂದರೆ ಕಳೆದ ವರ್ಷಕ್ಕಿಂ ತಲೂ ಹೆಚ್ಚು ಓಣಂ ಬಂಪರ್ ಲಾಟರಿ ಟಿಕೆಟ್‌ಗಳು ಸೇರಿ ಮಾರಾಟ ವಾಗಿದೆ. ಸೆಪ್ಟಂಬರ್ 27ರಂದು ನಡೆಯಬೇಕಾಗಿದ್ದ ತಿರುವೋಣಂ ಬಂಪರ್ ಡ್ರಾವನ್ನು ಈಗ ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 2.32 ಲಕ್ಷ ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳು ಮಾರಾಟವಾಗಿತ್ತು. ಸೆ. 26ರ ತನಕದ ಲೆಕ್ಕಾಚಾರದಂತೆ ಕಳೆದ ವರ್ಷಕ್ಕಿಂತಲೂ ಈ ವರ್ಷ 24,800ರಷ್ಟು ಹೆಚ್ಚು ತಿರುವೋಣಂ ಬಂಪರ್ ಟಿಕೆಟ್‌ಗಳು ಜಿಲ್ಲೆಯಲ್ಲಿ ಮಾರಾಟವಾಗಿದೆ. ಇನ್ನು 4ರ ವೇಳೆ ಈ ಟಿಕೆಟ್‌ಗಳು ಮಾರಾಟವಾಗುವ ಸಂಖ್ಯೆ ಇನ್ನೂ ಮೀರಬಹುದು. ಜಿಲ್ಲೆಯಲ್ಲಿ ಒಟ್ಟು 293 ಅಂಗೀಕೃತ ಲಾಟರಿ ಏಜೆನ್ಸಿಗಳಿವೆ. ಇದರ ಹೊರತಾಗಿ ಶಬರಿ ಲಾಟರಿ ಏಜೆನ್ಸಿಗಳಿಂದ ಲಾಟರಿ ಟಿಕೆಟ್ ಪಡೆದು ಚಿಲ್ಲರೆ ರೂಪದಲ್ಲಿ ಅದನ್ನು ಮಾರಾಟಮಾಡುವ ಅದೆಷ್ಟೋ ಮಂದಿ ಬೇರೆಯೇ ಇದ್ದಾರೆ. ರಖಂ ಲಾಟರಿ ಟಿಕೆಟ್ ಮಾರಾಟ ಏಜೆನ್ಸಿಗಳು ಮಾತ್ರವಾಗಿ ಜಿಲ್ಲೆಯಲ್ಲಿ 36,000 ಲಾಟರಿ ಟಿಕೆಟ್‌ಗಳು ಖರೀದಿಸಿದ್ದಾರೆ.

You cannot copy contents of this page