ಮಂಜೇಶ್ವರA: 17 ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದ ಕುಂಜತ್ತೂರು ತೂಮಿನಾಡು ನಿವಾಸಿ ಖತ್ತಾರ್‌ನಲ್ಲಿ ಆಂಬುಲೆನ್ಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ತೂಮಿನಾಡು ಹಿಲ್ಟೋಪ್ ನಿವಾಸಿ ದಿ| ಅಬೂಬಕರ್ ಅವರ ಪುತ್ರ ಹಾರಿಸ್ (39) ಖತ್ತಾರ್‌ನಲ್ಲಿ ಆಂಬುಲೆನ್ಸ್ ಡಿಕ್ಕಿ ಹೊಡೆದು ಮೃತಪಟ್ಟವರು.
ಖತ್ತಾರ್‌ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದರು. ವಾಹನ ಓಡಿಸುವಾಗ ಟೈರ್ ಪಂಕ್ಚರ್ ಆದ ಕಾರಣ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದಾಗ ಆ ದಾರಿಯಾಗಿ ಬಂದ ಆಂಬ್ಯುಲೆನ್ಸ್ ಇವರಿಗೆ ಡಿಕ್ಕಿ ಹೊಡೆದಿದೆ. ಮೃತರು ತಾಯಿ ಫಾತಿಮಾ, ಪತ್ನಿ ಅಮೀನಾ ಸಮೀನಾ, ಮಕ್ಕಳಾದ ಫಾತಿಮತ್ ಇಸ್ರಾ, ನಫೀಸತ್ ರಿಫಾ, ಆಯಿಷತ್ ಝುಹಾ, ಹಾಜಿರಾ, ಮಹಮ್ಮದ್ ಮುಸ್ತಾಕ್, ಸಹೋದರರಾದ ನವಾಜ್, ಮುನೀರ್, ಅನ್ಸಾರ್, ಸಕೀರ್, ಇರ್ಷಾದ್, ಫೌಜಿಯಾ, ರಜಿಯಾ, ಜಲಾಲುದ್ದೀನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
