ಬಿಜೆಪಿ ಪ್ರಜಾಪ್ರಭುತ್ವ ಸಂರಕ್ಷಣಾ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರುಮಂದಿ: ಮೋಕ್ ಪಾರ್ಲಿಮೆಂಟ್ ನಡೆಸಿ ಕಾಂಗ್ರೆಸ್ ಸ್ವತಃ ಅಪಹಾಸ್ಯಕ್ಕೀಡಾಗಿದೆ-ಪ್ರೊ| ಎಂ. ನಾಗರಾಜ

ಕಾಸರಗೋಡು: ಮೋಕ್ ಪಾರ್ಲಿ ಮೆಂಟ್ ಆಯೋಜಿಸಿ ಮುಖ್ಯ ಚುನಾ ವಣಾ ಆಯುಕ್ತರನ್ನು ಪದಚ್ಯುತಿಗೊಳಿ ಸುತ್ತಿದ್ದೇವೆ ಎಂಬ ಪ್ರಚಾರದ ಮೂಲಕ ಕಾಂಗ್ರೆಸ್ ಸ್ವತಃ ಅಪಹಾಸ್ಯಕ್ಕೀಡಾಗಿದೆ ಮತ್ತು ಕಾಂಗ್ರೆಸ್‌ನ ಶವಪೆಟ್ಟಗೆಗೆ ಮೊಳೆ  ಹೊಡೆಯುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸಂಸದ ಪ್ರೊ| ಎಂ.ನಾಗರಾಜ ಹೇಳಿದರು. ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡಿನಲ್ಲಿ ನಿನ್ನೆ ಆಯೋಜಿಸಿದ್ದ  ಪ್ರಜಾಪ್ರಭುತ್ವ ಸಂ ರಕ್ಷಣಾ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಜನರ  ಹೃದಯದಲ್ಲಿ ಸ್ಥಾನ ಪಡೆದರೆ ಮಾತ್ರ ಪ್ರಧಾನಮಂತ್ರಿ ಹುದ್ದೆಯನ್ನು ಪಡೆಯಲು ಸಾಧ್ಯ ಎಂಬುವುದನ್ನು ರಾಹುಲ್ ಗಾಂಧಿ ಅರಿತುಕೊಳ್ಳ ಬೇಕು. ಕಳೆದ ಮೂರು ಚುನಾವಣೆ ಗಳಲ್ಲಿ ಭರ್ಜರಿ ಜಯ ಸಾಧಿಸಿ ಮುಂದಿನ  ಬಾರಿಯೂ  ಲೋಕಸಭಾ ಚುನಾವಣೆಗೆ ನರೇಂದ್ರಮೋದಿ ಸಜ್ಜಾಗುತ್ತಿದ್ದಾರೆ.  ಕಳೆದ 25 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಕಳಂಕವೂ ಅಂಟಿಕೊಳ್ಳದ ಅವರನ್ನು ಕಾಂಗ್ರೆಸ್ ಪಕ್ಷ ಸುಳ್ಳು ಪ್ರಚಾರಗಳ ಮೂಲಕ ಅಧಿಕಾರದಿಂದ  ಕೆಳಕ್ಕಿಳಿಸಲು ನೋಡುತ್ತಿದೆ.  ಯಾವುದೇ ಭ್ರಷ್ಟಾಚಾರ ಅಥವಾ ಸ್ವಜನ ಪಕ್ಷಪಾತವಿಲ್ಲದೆ  ‘ಪ್ರಧಾನಮಂತ್ರಿಯಲ್ಲ ಪ್ರಧಾನ ಸೇವಕ’ ಎಂಬ ಮನೋಭಾವ ದೊಂದಿಗೆ ಆಡಳಿತ ನಡೆಸಲು ಅವರಿಗೆ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು. ಆರ್ಥಿಕವಾಗಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದ  ದೇಶವನ್ನು ಕೇವಲ ಒಂದು ದಶಕದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವನ್ನಾಗಿ ನರೇಂದ್ರಮೋದಿ ಬೆಳೆಸಿದ್ದಾರೆ. ಈ ಅಭಿವೃ ದ್ಧಿಯೇ  ರಾಹುಲ್ ಗಾಂಧಿ ಮತ್ತು ಬಳಗವನ್ನು ಅಸ್ವಸ್ಥಗೊಳಿಸುತ್ತಿದೆ. ತಾವು ಗೆಲ್ಲುವ ರಾಜ್ಯಗಳಲ್ಲಿ ಮಾತ್ರ ಎಸ್‌ಐಆರ್ ಸರಿಯೆಂದು ಹೇಳುತ್ತಾರೆ.  ಕೇರಳ, ಕರ್ನಾಟಕ, ಹಿಮಾಚಲಪ್ರದೇ ಗಳಲ್ಲಿನ ಚುನಾವಣಾ ಫಲಿತಾಂಶಗಳ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ದೂರುಗಳಿಲ್ಲ. ಬೇರೆಡೆಗಳಲ್ಲಿ ಮತಯಂತ್ರ ಮತ್ತು ಎಸ್‌ಐಆರ್‌ಗೆ ಯಾವುದೇ ಸಮಸ್ಯೆ ಯಿಲ್ಲ. ಬ್ಯಾಲೆಟ್ ಪೇಪರ್ ಮೂಲಕ  ನಡೆದ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ದೊಡ್ಡ ಸೋಲಾಗಿದೆ. ಇನ್ನು ಮುಂದಿನ ಸೋಲುಗಳಿಗೆ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಹೊಸ ಸಮರ್ಥನೆಗಳನ್ನು ಕಂಡುಕೊಳ್ಳಬೇಕೆಂದು ನಾಗರಾಜ ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ಎಂ. ವೆಂಕಟೇಶನ್, ಕೇಂದ್ರ ಸಚಿವ ಸುರೇಶ್ ಗೋಪಿ, ಚಾತನ್ನೂರು ಶಾಸಕ ಬಿ.ಬಿ. ಗೋಪಕುಮಾರ್,  ಬಿಜೆಪಿ  ರಾಜ್ಯ ಪ್ರಧಾನ ಕಾರ್ಯದರ್ಶಿ  ಎಸ್. ಸುರೇಶ್, ರಾಜ್ಯ ಸೆಲ್ ಸಂಯೋಜಕ ವಿ.ಕೆ. ಸಜೀವನ್, ರಾಷ್ಟ್ರೀಯ ಪರಿಷತ್ ಸದಸ್ಯ ಎಂ. ಸಂಜೀವಶೆಟ್ಟಿ, ಕಣ್ಣೂರು ವಲಯ ಅಧ್ಯಕ್ಷ ಕೆ. ಶ್ರೀಕಾಂತ್, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್, ವಲಯ ಉಪಾಧ್ಯಕ್ಷ ವಿಜಯ ರೈ, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ವಿ. ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ರವೀಶ ತಂತ್ರಿ ಕುಂಟಾರು, ಸತೀಶ್ಚಂದ್ರ ಭಂಡಾರಿ,ಸವಿತಾ ಟೀಚರ್, ಪ್ರಮೀಳ ಸಿ. ನಾಯ್ಕ್, ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರ, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು, ಮೋರ್ಛಾ ಜಿಲ್ಲಾ ಪದಾಧಿಕಾರಿಗಳು ಮಾತನಾಡಿದರು.

ಕಾಸರಗೋಡು ನಗರದ ಪ್ರೆಸ್ ಕ್ಲಬ್ ಜಂಕ್ಷನ್‌ನಿಂದ ಆರಂಭಗೊಂಡು ಹಳೆ ಬಸ್ ನಿಲ್ದಾಣ ಮೂಲಕ ಸಾಗಿದ ಪಾದಯಾತ್ರೆಯು  ಕರಂದಕ್ಕಾಡ್‌ನ ಸಮಾವೇಶ ನಗರಿಯಲ್ಲಿ ಸಮಾಪ್ತಿಗೊಂಡಿತು. ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

RELATED NEWS

You cannot copy contents of this page