ಕುಂಬಳೆ: ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಕುಂಬಳೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಸೂರಂಬೈಲ್ ಅಂಬೇಡ್ಕರ್ ಕಾಲನಿಯ ರಾಧಾಕೃಷ್ಣನ್, ಪೆರಿಯಡ್ಕದ ಹನೀಫ, ಬಡಾಜೆ ಪಾರಪ್ಪಳ್ಳಿಯ ಮುಹಮ್ಮದ್ ಸಲಿಯಾರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ರಾಧಾಕೃಷ್ಣನ್ 2018ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಹನೀಫ 2007ರಲ್ಲಿ ದಾಖಲಾದ ಅಬಕಾರಿ ಪ್ರಕರಣದ ಆರೋಪಿಯಾಗಿದ್ದಾನೆ. ಮುಹಮ್ಮದ್ ಸಲಿಯಾರ್ ಮನೆಯೊಂದಕ್ಕೆ ನುಗ್ಗಿ 2000 ರೂ. ಕಳವುಗೈದ ಪ್ರಕರಣದ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.







