ಕಾಸರಗೋಡು: ಮಾಹಿ ನಿರ್ಮಿತ ಮದ್ಯದೊಂದಿಗೆ ಮೂವರನ್ನು ಕಾರು ಸಹಿತ ಪೊಲೀಸರು ಬಂಧಿಸಿದ್ದಾರೆ. 25 ಲೀಟರ್ ಮಾಹಿ ಮದ್ಯವನ್ನು ವಶಪಡಿಸಲಾಗಿದೆ. ಕರ್ನಾಟಕ ಮಡ್ಯ ನಿವಾಸಿಗಳದ ನವೀನ್ (31),ಸುರೇಶ್ (30) ಮತ್ತು ಜಯಕುಮಾರ್ (25) ಎಂಬವರು ಬಂಧಿತರಾದವರು. ಚಿತ್ತಾರಿಕ್ಕಲ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಂಜಿತ್ ರವೀಂದ್ರನ್ ಮತ್ತು ಎಎಸ್‌ಐ ಸುನಿಲ್ ಅಬ್ರಹಾಂ ನೇತೃತ್ವದ ಪೊಲೀಸರ ತಂಡ ನಿನ್ನೆ ಕುನ್ನಂಗೈಯಿಂದ ಮಾಲು ಸಹಿತ ಬಂಧಿಸಿದೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
