ಮಾದಕದ್ರವ್ಯ ಸಹಿತ ಇಂಜಿನಿಯರ್ ಸೇರಿ ಮೂವರ ಬಂಧನ: ತಪ್ಪಿಸಿಕೊಳ್ಳಲು ಮಾದಕದ್ರವ್ಯ ನೀರಲ್ಲಿ ಮಿಶ್ರಣಗೊಳಿಸಿದ ಆರೋಪಿಗಳು

ಕಾಸರಗೋಡು: ಕಾಸರಗೋಡು ಅಬಕಾರಿ ತಂಡ ಪಳ್ಳಿಕ್ಕರೆ ಕಲ್ಲಿಂಗಾಲ್ ನಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾದಕದ್ರವ್ಯವಾದ 4.813 ಗ್ರಾಂ ಮೆಥಾಫಿಟಾಮಿನ್ ಹಾಗೂ ಮಾದಕ ದ್ರವ್ಯ ಮಿಶ್ರಣಗೊಳಿಸಿದ 618 ಗ್ರಾಂ ನೀರನ್ನು  ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಚಟ್ಟಂಚಾಲ್ ಕುನ್ನಾರದ ಕೆ. ಅಬ್ಬಾಸ್ ಅರಾಫತ್ (26), ಮುಟ್ಟತ್ತೋಡಿ  ಸಂತೋಷ್‌ನಗರದ ಮೊಹಮ್ಮದ್  ಅಮೀನ್ (21) ಮತ್ತು ಪಳ್ಳಿಕ್ಕೆರೆ  ತೊಟ್ಟಿ ನಿವಾಸಿ ಟಿ.ಎಂ. ಫೈಸಲ್ (38) ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇವರು ಬಳಸುತ್ತಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್  ಕಮಿಶನರ್ ಪಿ.ಪಿ. ಜನಾರ್ದ ನನ್‌ರ ನೇತೃತ್ವದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿ.ಕೆ.ವಿ.ಸುರೇಶ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪಿ. ರಾಜೇಶ್, ಪಿ.ವಿ.ಶಿಜಿತ್, ಪಿ. ಶೈಲೇಶ್ ಕುಮಾರ್, ಸೋನು ಸೆಬಾಸ್ಟಿನ್, ಕಾಸರಗೋಡು ಎಕ್ಸೈಸ್ ಸರ್ಕಲ್  ಕಚೇರಿಯ ಪ್ರಿವೆಂಟೀವ್‌ಆಫೀಸರ್ ದಿನೇಶನ್ ಕುಂಡತ್ತಿಲ್, ಹೊಸದುರ್ಗ ಎಕ್ಸೈಸ್ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

ಪಳ್ಳಿಕ್ಕೆರೆ ಕಲ್ಲಿಂಗಾಲ್‌ನಲ್ಲಿ ಆರೋಪಿ ಫೈಸಲ್ ಪ್ಲಾನ್ ಮತ್ತು ಎಸ್ಟಿಮೇಟ್ ತಯಾರಿಸುವ ಸಂಸ್ಥೆ ಹೊಂದಿದ್ದು ಇಲ್ಲಿ ಮಾದಕದ್ರವ್ಯ ವ್ಯವಹಾರ ನಡೆಸುತ್ತಿರುವುದಾಗಿ ಗುಪ್ತ ಮಾಹಿತಿ ಅಬಕಾರಿ ಇಲಾಖೆಗೆ ಲಭಿಸಿತ್ತು. ಅದರ ಜಾಡು ಹಿಡಿದು ಅಬಕಾರಿ ತಡ ಮೊನ್ನೆ ರಾತ್ರಿ ನಡೆಸಿದ ಪರಿಶೀ ಲನೆಯಲ್ಲಿ ಮೇಜಿನ ಮೇಲಿರಿಸಲಾಗಿದ್ದ ನೀರಿನ ಬಾಟಲಿಯನ್ನು ಪರಿಶೀಲಿದಾಗ ಅದರಲ್ಲಿ ಮಾದಕದ್ರವ್ಯ ಮಿಶ್ರಣಗೊಳಿಸಿ ರುವುದು ಪತ್ತೆಯಾಗಿದೆ. ಅಬಕಾರಿ ದಾಳಿ ನಡೆಯುವ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ತಮ್ಮ ಕೈಯಲ್ಲಿದ್ದ ಮಾದಕದ್ರವ್ಯವನ್ನು ಬಾಟಲಿ ನೀರಿನಲ್ಲಿ ಮಿಶ್ರಣಗೊಳಿಸಿದ್ದಾರೆಂದು ತನಿಖೆ ಯಲ್ಲಿ ಸ್ಪಷ್ಟಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲ ಆರೋಪಿಗಳು ಉಪಯೋಗಿಸುತ್ತಿದ್ದ ಕಾರು, ಮೆಥಾಫಿಟಾಮಿನ್ ಮಾದಕದ್ರವ್ಯ ಸೇವಿಸಲು ಬಳಸಲಾಗುವ ಉಪಕರಣ ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿ ದೆಯೆಂದೂ  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿಗ ಳನ್ನು ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

RELATED NEWS

You cannot copy contents of this page