ಉಪ್ಪಳ: ಎಂಡಿಎಂಎ ಸಾಗಿಸುತ್ತಿದ್ದ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಒಂದು ಆಟೋ ರಿಕ್ಷಾ ಹಾಗೂ ಬುಲ್ಲೆಟ್ ಬೈಕ್ ವಶಪಡಿಸಲಾಗಿದೆ. ಮಂಜೇಶ್ವರ ಪೊಸೋಟ್ ಆದರ್ಶ್‌ನಗರ ಅನ್ಸೀನ ಮಂಜಿಲ್‌ನ ಅನ್ಸಾರ್ ಐ.ಬಿ (36), ಉದ್ಯಾವರ ಸೆಕೆಂಡ್ ರೈಲ್ವೇ ಗೇಟ್ ಬಳಿಯ ಮದೀನಾ ಮಂಜಿಲ್‌ನ ಸಿರಾಜುದ್ದೀನ್ (24), ಪಾವೂರು ಮಚ್ಚಂಪಾಡಿ ಪಳ್ಳ ಗುಡ್ಡೆ ಹೌಸ್‌ನ ಅಹಮ್ಮದ್ ಸೈಫುದ್ದೀನ್ (21) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ 3.39 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ ಸಂಜೆ 6.15ರ ವೇಳೆ ಬಡಾಜೆ ಸತ್ಯಡ್ಕ ಹಿಂದೂಸ್ತಾನ್ ಮೈದಾನ ಬಳಿ ಗಸ್ತು ನಡೆಸುತ್ತಿದ್ದ ವೇಳೆ ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






