ಕಾಸರಗೋಡು: ಜಿಲ್ಲೆಯಲ್ಲಿ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಶಾಲಾ ವಿದ್ಯಾರ್ಥಿ ಸಹಿತ ಮೂವರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಉಪ್ಪಳ ಸರಕಾರಿ ಪ್ರೌಢಶಾಲೆಯ ೮ನೆ ತರಗತಿ ವಿದ್ಯಾರ್ಥಿಯೂ ಉಪ್ಪಳ ಪಾರಕಟ್ಟೆ ನಿವಾಸಿಯಾದ 12ರ ಹರೆಯದ ಬಾಲಕ ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದಾನೆ. ಬಾಲಕ ಸಂಜೆ ಮನೆಗೆ ಮರಳಿ ತಲುಪದಿರುವುದರಿಂದ ನಡೆಸಿದ ತನಿಖೆ ವೇಳೆ ಈತ ಶಾಲೆಗೂ ತಲುಪಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕಾಞಂಗಾಡ್ ಕೊಟ್ರಚ್ಚಾಲ್ ನಿವಾಸಿಯೂ ಪಡನ್ನಕ್ಕಾಡ್ ಸಿ.ಕೆ. ನಾಯರ್ ಕಾಲೇಜಿನ ದ್ವಿತೀಯ ವರ್ಷ ಪದವಿ ವಿದ್ಯಾರ್ಥಿನಿಯಾದ ನಾದಿರ (21) ನಿನ್ನೆ ಸಂಜೆಯಿಂದ ನಾಪತ್ತೆಯಾ ಗಿದ್ದಾಳೆ. ಎಂದಿನಂತೆ ನಿನ್ನೆಯೂ ಈಕೆ ಕಾಲೇಜಿಗೆ ತೆರಳಿದ್ದಳು. ತರಗತಿ ಮುಗಿಸಿ ಕಾಲೇಜಿನಿಂದ ಮರಳಿದ ನಾದಿರ ಬಳಿಕ ಎಲ್ಲಿಗೆ ತೆರಳಿದ್ದಾರೆಂದು ತಿಳಿದುಬಂದಿಲ್ಲ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರುಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕರಿಂದಳ ಕಾಟಿಪ್ಪೊಯಿಲ್ ವಿಲ್ಯಾಟ್ ವೀಟಿಲ್‌ನ ಕೆ. ಮಜೀನ (26) ನೀಲೇಶ್ವರದ ಹಾಸ್ಟೆಲ್‌ನಿಂದ ನಿನ್ನೆ ನಾಪತ್ತೆಯಾಗಿದ್ದಾಳೆ. ನೀಲೇಶ್ವರ ಹೈಪರ್ ಮಾರ್ಕೆಟ್‌ನ ನೌಕರೆಯಾ ಗಿದ್ದಾಳೆ. ಸಂಸ್ಥೆಯ ಅಧೀನದಲ್ಲಿರುವ ಹಾಸ್ಟೆಲ್‌ನಿಂದ ಮಜೀನ ನಾಪತ್ತೆ ಯಾಗಿರುವುದಾಗಿ ನೀಲೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.