ಕಾಸರಗೋಡು: ಕಾಡುತ್ಪನ್ನ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಒಂದೂವರೆ ಕ್ವಿಂಟಾಲ್ ಕಾಳುಮೆಣ ಸನ್ನು ಕಳವುಗೈದ ಘಟನೆ ನಡೆದಿದೆ.
ಹೊಸದುರ್ಗ ಮಾವುಂಗಾಲ್ ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ಯವೆಸಗುತ್ತಿರುವ ವೆಳ್ಳಿಕ್ಕೋತ್ ನಿವಾಸಿ ಬಿ. ಗುರುದತ್ತ್ ಪ್ರಭು ಎಂಬವರ ಆರ್ಯ ದುರ್ಗಾ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಈ ಕಳವು ನಡೆದಿದೆ. ಮಾಲಕ ನಿನ್ನೆ ಬೆಳಿಗ್ಗೆ ಅಂಗಡಿ ಬಾಗಿಲು ತೆಗೆಯಲು ಬಂದಾಗ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಒಂದು ಲಕ್ಷ ರೂಪಾಯಿ ಮೌಲ್ಯದ ಕಾಳು ಮೆಣಸು ಕಳವಿಗೀಡಾಗಿದೆ. ಕಳ್ಳರು ಅಂಗಡಿಯ ಶೆಟರ್‌ನ ಬೀಗ ಒಡೆಯುವ ಯತ್ನವನ್ನು ನಡೆಸಿದ್ದರು. ಅಂಗಡಿಯ ಗೋಡೆ ಕೊರೆಯಲು ಕಳ್ಳರು ಉಪಯೋಗಿಸಿದ್ದ ಪಿಕ್ಕಾಸನ್ನು ಪೊಲೀಸರು ಅಲ್ಲೇ ಪಕ್ಕ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಅಂಗಡಿ ಮಾಲಕ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.