ಹಸಿರುಕೋಟೆ ಉಳುವಾರಿನಲ್ಲಿ ಸಿಪಿಎಂನಿಂದ ತೀವ್ರ ಸ್ಪರ್ಧೆ

ಕುಂಬಳೆ:  ಮುಸ್ಲಿಂ ಯೂತ್ ಲೀಗ್ ಮುಖಂಡ ಯೂಸಫ್ ಉಳುವಾರ್‌ನ ಸ್ವಂತ ವಾರ್ಡ್ ಆದ ಕುಂಬಳೆ ಪಂಚಾಯತ್‌ನ ೬ನೇ ವಾರ್ಡ್ ಉಳುವಾರ್‌ನಲ್ಲಿ  ಈ ಬಾರಿ ಮುಸ್ಲಿಂ ಲೀಗ್ ಸುಲಭದಲ್ಲಿ ಗೆಲುವು ಸಾಧಿಸದು ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ. ನ್ಯೂಜನ್ ಮತಗಳು ಸಿಪಿಎಂಗೆ ಲಭಿಸಲಿದ್ದು  ಇದು ಫಲಿತಾಂಶದಲ್ಲಿ ಬದಲಾವಣೆ ಸೃಷ್ಟಿಸಲಿದೆ.

ಕುಂಬಳೆ ಪಂಚಾಯತ್‌ನ ಹಸಿರು ಕೋಟೆ ಎಂದು ವಿಶೇಷಣೆ ಹೊಂದಿರುವ ಉಳುವಾರ್‌ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ನಾಫಿಯ ಹುಸೈನ್, ಸಿಪಿಎಂನ ಅಭ್ಯರ್ಥಿಯಾಗಿ ಆಯಿಷತ್ ರಜೂಲ, ಬಿಜೆಪಿ ಅಭ್ಯರ್ಥಿಯಾಗಿ ಮಮತ ಶಾಂತರಾಮ ಆಳ್ವ ಸ್ಪರ್ಧಿಸುತ್ತಿದ್ದಾರೆ. ಹಲವು ಕಾಲಗಳಿಂದ ಮುಸ್ಲಿಂ ಲೀಗ್ ಈ ವಾರ್ಡ್‌ನಲ್ಲಿ ಜಯ ಗಳಿಸುತ್ತಿದ್ದು, ಇಲ್ಲಿನ ಯೂಸಫ್ ಉಳುವಾರ್ ಮೂರು ಬಾರಿ ಇದೇ ವಾರ್ಡ್‌ನಿಂದ ವಿಜಯಪತಾಕೆ ಹಾರಿಸಿದ್ದಾರೆ. ಬದಲಾವಣೆಗಾಗಿರುವ ಮತ ಈ ಬಾರಿ ಜನರು ಸ್ವೀಕರಿಸಿದ್ದು, ಜಯ ತಮಗೆ ಖಚಿತವೆಂದು ಸಿಪಿಎಂ ಕಾರ್ಯಕರ್ತರು ನುಡಿಯುತ್ತಿದ್ದಾರೆ. ಇದಕ್ಕಾಗಿ ಸಕಲ ತಂತ್ರವನ್ನು ಸಿಪಿಎಂ ರಂಗಕ್ಕಿಳಿಸಿದೆ.

ಪಂಚಾಯತ್‌ನ ಇತರ ವಾರ್ಡ್‌ಗಳಂತೆ ಇಲ್ಲಿ ಕೂಡಾ ತೀವ್ರ ಸ್ಪರ್ಧೆ ಇದ್ದು, ಆದರೆ ಜಯ ನಮಗೆ ಖಚಿತವೆಂದು ಲೀಗ್ ನುಡಿಯುತ್ತಿದೆ. ಈ ಮಧ್ಯೆ ಇದರೆಡೆಯಲ್ಲಿ ಬಿಜೆಪಿಗೆ ಕೂಡಾ ಈ ವಾರ್ಡ್‌ನಲ್ಲಿ ಬಹಳಷ್ಟು ಮತವಿದ್ದು ಈ ಬಾರಿ ಹೆಚ್ಚಳ ಉಂಟಾ ಗಿದೆ. ಇದು ತಮ್ಮ ಗೆಲುವಿಗೆ ಸಹಕಾರಿ ಯಾಗಬಹುದೆಂದು ಬಿಜೆಪಿ ತಿಳಿಸಿದೆ.

RELATED NEWS

You cannot copy contents of this page