ಪೆರ್ಲ: ಕಾಟುಕುಕ್ಕೆ ಸಮೀಪದ ಕುರಿಯತ್ತಡ್ಕ ನಿವಾಸಿ ನಾರಾಯಣ ಪಾಟಾಳಿ ಯಾನೆ ಬಾಬು ಪಾಟಾಳಿ (62) ನಿಧನ ಹೊಂದಿದರು. ಕಾಟುಕುಕ್ಕೆ ಪರಿಸರದಲ್ಲಿ ಮರದ ವ್ಯಾಪಾರಿಯಾಗಿದ್ದ ಇವರು, ಇತ್ತೀಚೆಗೆ ಪೆರ್ಲ ಪುತ್ತಿಗೆ ರಸ್ತೆಯ ಅಮೆಕ್ಕಳದಲ್ಲಿ ಮರದ ಡಿಪ್ಪೋ ನಡೆಸುತ್ತಿದ್ದರು. ಅಸೌಖ್ಯ ತಗಲಿ ಸ್ವಲ್ಪ ಸಮಯದಿಂದ ಚಿಕಿತ್ಸೆಯಲ್ಲಿದ್ದರು.
ಮೃತರು ಪತ್ನಿಯಂದಿರಾದ ಯಶೋಧ, ಸುಶೀಲ, ಮಕ್ಕಳಾದ ಸುಪ್ರೀತ, ವಿಜಯ, ವಿನುತ, ರಂಜನ್, ರಕ್ಷಿತ್, ಅಳಿಯಂದಿರಾದ ರಾಮಕೃಷ್ಣ, ಉದಯ, ಶರತ್, ಸೊಸೆ ಭವ್ಯ, ಸಹೋದರ ಬಟ್ಯ (ನಿವೃತ್ತ ಶಿಕ್ಷಕ) ಹಾಗೂ ಸಹೋದರಿಯರು ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







