ಟಿಪ್ಪರ್ ಲಾರಿ ಗೂಡ್ಸ್ ಆಟೋ, ಆಟೋ ರಿಕ್ಷಾಕ್ಕೆ ಢಿಕ್ಕಿ: ಇಬ್ಬರು ಚಾಲಕರಿಗೆ ಗಾಯ

ಕುಂಬಳೆ:  ಟಿಪ್ಪರ್ ಲಾರಿಯೊಂದು   ಗೂಡ್ಸ್ ಆಟೋ ಹಾಗೂ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಸೂರಂಬೈಲು ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಗೂಡ್ಸ್ ಆಟೋ ಚಾಲಕ ಚೌಕಿಯ ಜುನೈದ್ ಹಾಗೂ ಆಟೋ ರಿಕ್ಷಾ ಚಾಲಕ ಸೂರಂಬೈಲಿನ ಸುಂದರ ಎಂಬಿವರು ಗಾಯಗೊಂಡಿದ್ದು, ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.  ಸೀತಾಂಗೋಳಿ ಭಾಗದಿಂದ ಕಂಬಳೆ ಭಾಗಕ್ಕೆ ಜಲ್ಲಿಕಲ್ಲು ಹೇರಿ ಸಾಗುತ್ತಿದ್ದ ಟಿಪ್ಪರ್ ಲಾರಿ ಹಾಲು ಸಾಗಿಸುತ್ತಿದ್ದ ಗೂಡ್ಸ್ ಆಟೋ ಹಾಗೂ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಘಟನೆ ವೇಳೆ ಆಟೋ ರಿಕ್ಷಾದಲ್ಲಿ  ಪ್ರಯಾಣಿಕರಿಲ್ಲದಿದ್ದುದರಿಂದ ದೊಡ್ಡ ಅಪಾಯ ತಪ್ಪಿಹೋಗಿದೆ.

RELATED NEWS

You cannot copy contents of this page