ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಿಂದ ತಿರಂಗ ಯಾತ್ರೆ

ಪೈವಳಿಕೆ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ, ದೇಶದ ಸೈನಿಕ ಶಕ್ತಿ ಆಪರೇಶನ್ ಸಿಂಧೂರ ಮೂಲಕ ಜಗತ್ತು ಕಂಡಿದೆ. ಭಾರತದ ಶಕ್ತಿಯನ್ನು ಮಣಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯಾರು ನಾರಾಯಣ ಶೆಟ್ಟಿ ಹೇಳಿದರು. ಬಾಯಿಕಟ್ಟೆಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆಯನ್ನು ನಿವೃತ್ತ ಸೈನಿಕ ವಸಂತ್ ಕೃಷ್ಣ ಶರ್ಮ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ.ರಿಗೆ ಧ್ವಜ ಹಸ್ತಾಂತರ ಮಾಡಿ ಉದ್ಘಾಟಿಸಿದರು.
ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಸ್ವಾತಂತ್ರ‍್ಯ ಸಂಗ್ರಾಮ, ದೇಶದ್ರೋಹಿಗಳನ್ನು ದೇಶ ಪ್ರೇಮಿಗಳು ಹಿಮ್ಮೆಟಿಸ ಬೇಕೆಂದು ಕರೆ ನೀಡಿದರು. ನಿವೃತ್ತ ಸೇನಾನಿ ಐತಪ್ಪ ಅಡ್ಯಂತಾಯ ಉಪಸ್ಥಿತರಿದ್ದರು. ಎಸ್.ಸಿ ಮೋರ್ಚಾ ರಾಜ್ಯ  ಉಪಾಧ್ಯಕ್ಷ ಎ.ಕೆ ಕಯ್ಯಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ  ಕಾರ್ಯದರ್ಶಿ ಲೋಕೇಶ್ ನೋಂಡ, ಸದಾಶಿವ ಚೇರಾಲ್, ಮಂಜುನಾಥ್ ಶೆಟ್ಟಿ, ಸಂದೀಪ್ ಬಾಯಾರ್, ಪ್ರವೀಣ್ ಪಟ್ಲ, ಸತ್ಯಶಂಕರ್ ಉಪಸ್ಥಿತರಿದ್ದರು. ಕೆ ವಿ ಭಟ್, ಸನತ್ ರೈ, ಬಾಲಕೃಷ್ಣ, ಪುಷ್ಪ ಲಕ್ಷ್ಮಿ, ಜಯಲಕ್ಷ್ಮಿ ಭಟ್, ಮಮತಾ, ರಾಜೀವಿ, ತುಳಸಿ ಕುಮಾರಿ, ಗಣೇಶ ಪ್ರಸಾದ್, ನಾಗೇಶ್ ಬಳ್ಳೂರು, ಪೊಯ್ಯೆ ಭಾಸ್ಕರ್ ನೇತೃತ್ವ ನೀಡಿದರು. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಯತಿರಾಜ್ ಶೆಟ್ಟಿ ವಂದಿಸಿದರು.

RELATED NEWS

You cannot copy contents of this page