ಕಾಸರಗೋಡು: ಮನೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 2526 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಗಳನ್ನು ವಿದ್ಯಾನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಮಧೂರು ಸಮೀಪದ ಕೋಟೆ ಕಣಿ ಕುಕ್ಕಂಬಾಡಿನ ಮನೆಯೊಂ ದರಿಂದ ಈ ಮಾಲು ಪತ್ತೆಹಚ್ಚಲಾ ಗಿದೆ. ವಿದ್ಯಾನಗರ ಎಸ್‌ಐ ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಪಟ್ಲ ತನ್ನಿಕೋಡ್ ಹೌಸ್‌ನ ಮೊಹಮ್ಮದ್ ಶೆರೀಫ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.