ಮಂಜೇಶ್ವರ: ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಅನಧಿಕೃ ತವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 215 ಕಿಲೋ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರದಲ್ಲಿ ಅಬಕಾರಿ ಅಧಿ ಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾರಿನಲ್ಲಿದ್ದ ವಡಗರ ತೆಕ್ಕಾಟಚಾಲಿ ನಿಯನ್ ಹೌಸ್‌ನ ಅಪ್ಸಲ್(31), ತಲಶ್ಶೇರಿ ಪಾಟಿಯಂ ವಲಿಯವೀಟಿಲ್‌ನ ಅಶ್ರಫ್ (40) ಎಂಬಿವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಹೊಸಂಗಡಿ ಬಳಿಯ ವಾಮಂಜೂರಿನಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಇಂದು ಮುಂಜಾನೆ 5.30ರ ವೇಳೆ ನಡೆಸಿದ ಕಾರ್ಯಾಚ ರಣೆಯಲ್ಲಿ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮಂಗಳೂರು ಭಾಗದಿಂದ ಬರುತ್ತಿದ್ದ ಕಾರನ್ನು ಅಬಕಾರಿ ಅಧಿಕಾರಿಗಳು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 19 ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಇವುಗಳನ್ನು ಕಣ್ಣೂರಿನ ಕೂತುಪರಂ ಬಕ್ಕೆ ಸಾಗಿಸುತ್ತಿರುವುದಾಗಿ ತಿಳಿದುಬಂ ದಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗಳಾದ ವಿನಯ ರಾಜ್, ಸಂತೋಷ್ ಕುಮಾರ್, ಪ್ರಿವೆಂಟೀವ್ ಆಫೀಸರ್ ಮಂಜು ನಾಥ ಆಳ್ವ, ಸಿವಿಲ್ ಎಕ್ಸೈಸ್ ಆಫೀ ಸರ್‌ಗಳಾದ ಅಬ್ದುಲ್ ಅಸೀಸ್, ಪ್ರಭಾಕರ, ಜನಾರ್ದನ ಎಂಬಿವರಿದ್ದರು.
