ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಇಂದು ಬೆಳಿಗ್ಗೆ ಪೊಲೀಸ್ ಬಂದೋಬಸ್ತ್ ನೊಂದಿಗೆ ಪುನರಾರಂಭಿಸಲಾಯಿತು. ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್‌ರ ನೇತೃತ್ವದಲ್ಲಿ ಸ್ಥಳದಲ್ಲಿ ಪೊಲೀ ಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ.
ಮೊನ್ನೆ ಮಧ್ಯಾಹ್ನ ಟೋಲ್ ಬೂತ್ ನಿರ್ಮಾಣ ಕೆಲಸ ಆರಂಭಿ ಸಲಾಗಿತ್ತು. ಈ ವೇಳೆ ಜನಪರ ಮುಷ್ಕರ ಸಮಿತಿ ಪದಾಧಿಕಾರಿಗಳು ಅಲ್ಲಿಗೆ ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಿ ಸಂಜೆ 3.30ಕ್ಕೆ ಮತ್ತೆ ಪೊಲೀಸರ ಕಾವಲಿನಲ್ಲಿ ಕೆಲಸ ಪುನರಾರಂಭಿಸಲಾಗಿತ್ತು. ಈ ವೇಳೆಯೂ ಮುಷ್ಕರ ಸಮಿತಿ ಪದಾಧಿ ಕಾರಿಗಳು ತಲುಪಿ ತಡೆಯೊಡ್ಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮುಷ್ಕರ ಸಮಿತಿಯ ಆರು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದರು.
ಇದೇ ಸಂದರ್ಭದಲ್ಲಿ ಟೋಲ್‌ಬೂತ್ ನಿರ್ಮಾಣ ಕೆಲಸ 60 ದಿನಗಳೊಳಗೆ ಪೂರ್ತಿಗೊಳಿಸಬೇಕೆಂದು ಗುತ್ತಿಗೆ ಕಂಪೆನಿಗೆ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಭಾರೀ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ ಪುನರಾರಂಭಿಸಲಾಗಿದೆ.
ಇದೇ ವೇಳೆ ಇಂದು ಕೂಡಾ ಕಾಮಗಾರಿಗೆ ತಡೆಯೊಡ್ಡಲು ಮುಷ್ಕರ ಸಮಿತಿ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಮುಷ್ಕರ ಸಮಿತಿಯ ಎಲ್ಲಾ ಕಾರ್ಯಕರ್ತರು ಮಧ್ಯಾಹ್ನ 12 ಗಂಟೆಗೆ ಟೋಲ್ ಬೂತ್ ನಿರ್ಮಾಣ ನಡೆಯುವ ಸ್ಥಳಕ್ಕೆ ತಲುಪುವಂತೆ ಮುಷ್ಕರ ಸಮಿತಿಯ ವಾಟ್ಸಪ್ ಗ್ರೂಪ್ ಪದಾಧಿಕಾರಿಗಳು ತಿಳಿಸಿದ್ದಾರೆ.