ಕುಂಬಳೆ: ಆರಿಕ್ಕಾಡಿಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಸಂಗ್ರಹಿಸಲಾ ಗುತ್ತಿರುವ ಟೋಲ್ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಹೆದ್ದಾರಿ ಪ್ರಾಧಿಕಾರದ ಸಾಮಗ್ರಿಗಳಿಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ದಾಖಲಿಸಿದ ಪ್ರಕರಣದಲ್ಲಿ ಇಬ್ಬರನ್ನು ಸೆರೆ ಹಿಡಿದು ಓರ್ವನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಾಧಿಕಾರದ ಅಧಿಕಾರಿಗಳು ಕುಂಬಳೆ ಪೊಲೀಸರಿಗೆ ನೀಡಿದ ದೂರಿನಂತೆ ಸಂಘರ್ಷ ವೇಳೆ 10 ಲಕ್ಷ ರೂ.ಗಳ ನಾಶನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ. ಇದರಲ್ಲಿ ಉಜಾರು ಕೊಡ್ಯಮ್ಮೆ ನಿವಾಸಿ ಫೈಸಲ್ ಅಬ್ದುಲ್ ರಹ್ಮಾನ್ (28), ವಾಮಂಜೂರು ಚೆಕ್ಪೋಸ್ಟ್ ನಿವಾಸಿ ಅಬ್ದುಲ್ ನಾಸರ್ ಟಿ. (46)ರನ್ನು ಸೆರೆ ಹಿಡಿಯಲಾಗಿದ್ದು, ಫೈಸಲ್ ಅಬ್ದುಲ್ ರಹ್ಮಾನ್ನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಬ್ದುಲ್ ನಾಸರ್ ಟಿ.ಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಘಟನೆಯ ವೀಡಿಯೋಗಳನ್ನು ಪರಿಶೀಲಿಸಿ ಆರೋ ಪಿಗಳ ಗುರುತು ಹಚ್ಚಲಾಗಿದ್ದು, ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸು ವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್.ಐ. ಶ್ರೀಜೇಶ್ ನೇತೃತ್ವದಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ.







