ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವಾರ್ಷಿಕ ಮಹಾಸಭೆ, ಧನ ಸಹಾಯ ವಿತರಣೆ 31ರಂದು

ಮಂಜೇಶ್ವರ: ಮಂಜೇಶ್ವರ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವಾರ್ಷಿಕ ಮಹಾಸಭೆ ಮತ್ತು ಮೃತಪಟ್ಟ ವ್ಯಾಪಾರಿಗಳ ಕುಟುಂಬಕ್ಕೆ ಧನ ಸಹಾಯ ವಿತರಣೆ ಈ ತಿಂಗಳ 31ರಂದು ಬೆಳಿಗ್ಗೆ 10 ಗಂಟೆಗೆ ಹೊಸಂಗಡಿ ವ್ಯಾಪಾರ ಭವನದಲ್ಲಿ ನಡೆಯಲಿದೆ. ಆಶ್ರಯ ಯೋಜನೆಯಲ್ಲಿ ಮೃತಪಟ್ಟ ವ್ಯಾಪಾರಿಗಳ ಕುಟುಂಬಕ್ಕೆ 4 ಲಕ್ಷ ರೂ.ನಂತೆ ಎರಡು ಕುಟುಂಬಗಳಿಗೆ ಶಾಸಕ ಎ.ಕೆ.ಎಂ. ಅಶ್ರಫ್ ಧನ ಸಹಾಯ ವಿತರಿಸುವರು. ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವ್ಯಾಪಾರಿಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಅಧ್ಯಕ್ಷ ಬಷೀರ್ ಕನಿಲ ಅಧ್ಯಕ್ಷತೆ ವಹಿಸುವರು. ಜಿಲ್ಲಾಧ್ಯಕ್ಷ ಕೆ.ಅಹಮ್ಮದ್ ಶರೀಫ್ ಉದ್ಘಾಟಿಸುವರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀಮಾ ಟೀಚರ್, ಜನಮೈತ್ರಿ ಪೊಲೀಸ್ ಮಧು, ಹಸೈನಾರ್ ಯು., ದಯಾನಂದ ಬಂಗೇರ, ಸದ್ಯೋಜಾತ, ಅಹಮ್ಮದ್ ಬಾವ, ಸುದರ್ಶನ್, ಕುಮುದ, ಹಮೀದ್ ಹೊಸಂಗಡಿ, ಸಲಾಂ ಹೊಸಂಗಡಿ ಮಾತನಾಡುವರು.

You cannot copy contents of this page