ಅ. 15ರಂದು ವ್ಯಾಪಾರಿಗಳಿಂದ ಲೋಕಭವನ್ ಮಾರ್ಚ್:13ರಂದು ಸಂಜೆ ದೊಂದಿ ಮೆರವಣಿಗೆ

ಕಾಸರಗೋಡು: ಯುಪಿಐ ವ್ಯವಹಾರಗಳ ಮೇಲೆ ಹೇರಿದ ಎಂಡಿಆರ್ ಶುಲ್ಕ ಹಿಂತೆಗೆಯಬೇಕೆಂದು ಒತ್ತಾಯಿಸಿ ಅ. 15ರಂದ ಬೆಳಿಗ್ಗೆ 1೦ಕ್ಕೆ ತಿರುವನಂತಪುರ ಲೋಕ ಭವನಕ್ಕೆ ನಡೆಯಲಿರುವ ಮಾರ್ಚ್ ಯಶಸ್ವಿಗೊಳಿಸಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್  ಶರೀಫ್ ವಿನಂತಿಸಿದ್ದಾರೆ. ಅಂದು ಎಲ್ಲಾ ವ್ಯಾಪಾರಿಗಳೂ ಯುಪಿಐ ವ್ಯವಹಾರಗಳನ್ನು ಬಹಿಷ್ಕರಿಸಬೇಕೆಂದೂ ಅವರು ಕರೆ ನೀಡಿದರು. ಕೆವಿವಿಇಎಸ್ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ಲೋಕಭವನ್ ಮಾರ್ಚ್‌ನಲ್ಲಿ ಜಿಲ್ಲೆಯಿಂದ  ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಭಾಗಹಿಸಬೇಕೆಂದೂ ಅವರು ತಿಳಿಸಿದರು. ಪ್ರತಿಭಟನೆಯ ಅಂಗವಾಗಿ ೧೩ರಂದು ಸಂಜೆ ೬ ಗಂಟೆಗೆ ಎಲ್ಲಾ ಘಟಕಗಳಲ್ಲೂ ದೊಂದಿ ಮೆರವಣಿಗೆ ನಡೆಸಲಾಗುವುದೆಂದೂ ಕೆ. ಅಹಮ್ಮದ್ ಶರೀಫ್ ತಿಳಿಸಿದರು. ಸಭೆಯಲ್ಲಿ ಅಸೀಸ್ ಎ.ಎ, ಸಿ. ಹಂಸ,  ಎ.ವಿ. ಹರಿಹರಸುತನ್, ಶಿಹಾಬ್ ಉಸ್ಮಾನ್, ಸಿ.ಎಚ್. ಅಬ್ದುಲ್ ರಹೀಂ, ಸಿ.ಕೆ. ಆಸಿಫ್, ಮಾಹಿನ್ ಕೋಳಿಕ್ಕರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ ಸ್ವಾಗತಿಸಿ, ಕೋಶಾಧಿಕಾರಿ ಪಿ. ಮುಸ್ತಫ ವಂದಿಸಿದರು.

You cannot copy contents of this page