ಮಜೀರ್ಪಳ್ಳ: ಮಜೀರ್ಪಳ್ಳ- ಬೊಡ್ಡೋಡಿ- ಕೂಟತ್ತಜೆ ರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 2ರವರೆಗೆ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಈ ಮೂಲಕ ಸಾಗುವ ವಾಹನಗಳು ಕೃಷಿ ವಿಜ್ಞಾನ ಕೇಂದ್ರ ರಸ್ತೆ ಮೂಲಕ ಧರ್ಮನಗರ ಸುಂಕದಕಟ್ಟೆ ರಸ್ತೆ ಮೂಲಕ ಹಾಗೂ ಬಲಿಪಗುಳಿಯಿಂದ ಧರ್ಮನಗರ ದರ್ಗ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಎಂದು ಲೋಕೋಪಯೋಗಿ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.






