ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆದ ಬಳಿಕ ಕುಂಬಳೆಯಲ್ಲಿ ಸಾರಿಗೆ ಸಮಸ್ಯೆಗೆ ಯಾವುದೇ ಪರಿಹಾರ ಉಂಟಾಗಿಲ್ಲ. ದಿನದಿಂದ ದಿನಕ್ಕೆ ಸಾರಿಗೆ ಅಡಚಣೆ ತೀವ್ರಗೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತಿದೆ. ಕುಂಬಳೆ ಬಸ್ ನಿಲ್ದಾಣದಿಂದ ರೈಲು ನಿಲ್ದಾಣದ ಅಂಡರ್ ಪಾಸ್‌ವರೆಗೆ ಸಾರಿಗೆ ಅಡಚಣೆ ನಿತ್ಯ ಘಟನೆಯಾಗಿದೆ. ಈ ಭಾಗದಲ್ಲಿ ಒಂದೇ ಸರ್ವೀಸ್ ರಸ್ತೆಯಿದ್ದು, ಅಗಲ ಕಿರಿದಾದ ಅದರಲ್ಲೇ ವಾಹನಗಳು ಆಚೀಚೆ ಸಂಚರಿಸಬೇಕಾಗಿ ಬರುತ್ತಿದೆ. ಅಲ್ಲದೆ ಕಾಲುದಾರಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಇನ್ನಷ್ಟು ಸಮಸ್ಯೆ ಎದುರಾಗುತ್ತಿದೆ. ಸಾರಿಗೆ ಅಡಚಣೆ ತೀವ್ರಗೊಂಡಿದ್ದರೂ ಅದನ್ನು ನಿವಾರಿಸಲು ಪೊಲೀಸರ ಭಾಗದಿಂದ ಯಾವುದೇ ಕ್ರಮ ಉಂಟಾಗುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ.
