ಕಾಸರಗೋಡು: ಕಾಸರಗೋಡು ಪ್ರಸ್‌ಕ್ಲಬ್ ಜಂಕ್ಷನ್‌ನಲ್ಲಿ ಇಂದಿನಿಂದ ಅ.15ರವರೆಗೆ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. ರಸ್ತೆ ಕಾಮಗಾರಿ ಯಂಗವಾಗಿ ಫ್ರೀಲೆಫ್ಟ್ ಭಾಗವನ್ನು ಪೂರ್ಣವಾಗಿ ಮುಚ್ಚುಗಡೆಗೊಳಿಸಿ ಸಂಚಾರ ನಿಯಂತ್ರಣ ಏರ್ಪಡಿಸಲಾಗುತ್ತಿದೆ. ಕಾಸರಗೋಡು ಎಚ್‌ಪಿ ಗ್ಯಾಸ್ ಅಂಗಡಿಯಿಂದ ಕಿಡ್ಸ್ ಗೋಲ್ಡ್ ಜ್ಯುವೆಲ್ಲರಿವರೆಗಿರುವ ಎಡಭಾಗದ ರಸ್ತೆಯಲ್ಲಿ ಹಾನಿಗೊಂಡ ಭಾಗವನ್ನು ದುರಸ್ತಿ ನಡೆಸಲಾಗುವುದು. ಸಂಚಾರ ನಿಯಂತ್ರಣವನ್ನು ಪಾಲಿಸಬೇಕೆಂದು ಲೋಕೋಪಯೋಗಿ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.
